Thursday, August 6, 2026

BDA Apartments

Home Cinema ನಟ ಸತೀಶ್ ನೀನಾಸಂ ನಟನೆಯ ‘ಗೋಧ್ರಾ’ ಟೈಟಲ್ ಬದಲಾವಣೆ

ನಟ ಸತೀಶ್ ನೀನಾಸಂ ನಟನೆಯ ‘ಗೋಧ್ರಾ’ ಟೈಟಲ್ ಬದಲಾವಣೆ

ಬೆಂಗಳೂರು, ಜೂನ್ 10, 2020 (www.justkannada.in): ನಟ ಸತೀಶ್‌ ನೀನಾಸಂ ನಾಯಕನಾಗಿ ನಟಿಸಿರುವ ‘ಗೋಧ್ರಾ’ ಸಿನಿಮಾದ ಟೈಟಲ್ ಬದಲಾಗಿದೆ. ಚಿತ್ರತಂಡ ಶೀರ್ಷಿಕೆಯನ್ನು ಬದಲಾಯಿಸಿದ್ದು, ‘ಡಿಯರ್‌ ವಿಕ್ರಂ’ ಎಂದು ಮರುನಾಮಕರಣ ಮಾಡಿದೆ.

ಅಂದಹಾಗೆ ‘ಡಿಯರ್‌ ವಿಕ್ರಂ’ ಹೆಸರಿನಲ್ಲಿ ಒಟಿಟಿ ವೇದಿಕೆ ವೂಟ್‌ ಸೆಲೆಕ್ಟ್‌ನಲ್ಲಿ ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬ ವಿಷಯವೂ ಹೊರ ಬಿದ್ದಿದೆ. ‘ಡಿಯರ್‌ ವಿಕ್ರಂ’ ಕ್ರಾಂತಿ ಮತ್ತು ಪ್ರೀತಿಯ ಸುತ್ತಲೂ ಹೆಣೆದಿರುವ ಸುಂದರವಾದ ಕಥನ.

ಶೀರ್ಷಿಕೆ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಕೂಡ ಸೂಚಿಸಿತ್ತು. ಈ ಸಿನಿಮಾ ಪ್ರಸ್ತುತ ರಾಜಕೀಯ ಅರಾಜಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಚಿತ್ರತಂಡ. ಹೇಳಿಕೊಂಡಿತ್ತು.

ನಂದೀಶ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷಾ ಸೋಮಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.