ಶಿವಾಜಿ ಸುರತ್ಕಲ್ ಪಾರ್ಟ್ 2 ಕೆಲ್ಸ ಶುರುವಾಯ್ತು ಎಂದ ರಮೇಶ್ ಅರವಿಂದ್

ಬೆಂಗಳೂರು, ಮಾರ್ಚ್ 17, 2020 (www.justkannada.in): ನಟ ರಮೇಶ್ ಅರವಿಂದ್ ಈಗಾಗಲೇ ಶಿವಾಜಿ ಸುರತ್ಕಲ್ ಪಾರ್ಟ್ 2 ಕೆಲಸ ಶುರು ಮಾಡಿದ್ದಾರೆ.

ಹೌದು. ನಿರ್ದೇಶಕ ಆಕಾಶ್ ಬರ್ತ್ ಡೇಗೆ ಶುಭ ಹಾರೈಸಿರುವ ರಮೇಶ್ ಅರವಿಂದ್ ಈ ವಿಚಾರವನ್ನು ಹೇಳಿದ್ದಾರೆ. ರಮೇಶ್ ಅರವಿಂದ್ ನಾಯಕರಾಗಿ ಅಭಿನಯಿಸಿದ್ದ ಶಿವಾಜಿ ಸುರತ್ಕಲ್ ಎಂಬ ಥ್ರಿಲ್ಲರ್ ಸಿನಿಮಾ ಜನ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದೇ ಹುಮ್ಮಸ್ಸಿನಲ್ಲಿ ನಿರ್ದೇಶಕ ಆಕಾಶ್ ಶ್ರೀವತ್ಸ ಪಾರ್ಟ್ 2 ಮಾಡುವುದಾಗಿ ಹೇಳಿದ್ದರು. ‘ಆಕಾಶ್ ಈಗಾಗಲೇ ಶಿವಾಜಿ ಸುರತ್ಕಲ್ ಎರಡನೇ ಭಾಗದ ಸ್ಕ್ರಿಪ್ಟ್ ತಯಾರಿಕೆಯಲ್ಲಿ ತೊಡಗಿದ್ದಾರೆ’ ಎಂದು ರಮೇಶ್ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.