Thursday, October 8, 2026

BDA Apartments

Home Cinema ಖ್ಯಾತ ಬಹುಭಾಷಾ ನಟ ನಾನಾ ಪಾಟೇಕಾರ್ ನಿಧನ: ಸಿಎಂ ಡಿಕೆಶಿ ಸಂತಾಪ

ಖ್ಯಾತ ಬಹುಭಾಷಾ ನಟ ನಾನಾ ಪಾಟೇಕಾರ್ ನಿಧನ: ಸಿಎಂ ಡಿಕೆಶಿ ಸಂತಾಪ

ಬೆಂಗಳೂರು,ಅಕ್ಟೋಬರ್,8,2026 (www.justkannada.in): ಹಿಂದಿ, ಮರಾಠಿ, ಕನ್ನಡ  ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ಬಹುಭಾಷಾ ನಟ, ಪದ್ಮಶ್ರೀ ಪುರಸ್ಕೃತ ನಾನಾ ಪಾಟೇಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗೋವಾದ ಪಣಜಿಯಲ್ಲಿರುವ ತಮ್ಮ ನಿವಾಸದಲ್ಲಿ ನಾನಾ ಪಾಟೇಕಾರ್ ತೀವ್ರ ಹೃದಯಘಾತದಿಂದ ನಿಧನರಾಗಿದ್ದಾರೆ.  ತಮ್ಮ ವಿಶಿಷ್ಟ ಅಭಿನಯ ಮತ್ತು ಖಡಕ್ ಸಂಭಾಷಣೆಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ನಾನಾಪಾಟೇಕರ್ ಸಂಪಾದಿಸಿದ್ದರು.Renowned dks dks 1

ನಾನಾ ಪಾಟೇಕರ್ ಅವರ ನಿಧನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. “ಅದ್ಭುತ ಕಲಾವಿದ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. ತಮ್ಮ ವಿಭಿನ್ನ ಹಾಗೂ ಮನೋಜ್ಞ ಅಭಿನಯದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಅವರು, ಕನ್ನಡದ ‘ಯಕ್ಷ’ ಚಿತ್ರದಲ್ಲಿಯೂ ಅಭಿನಯಿಸಿದ್ದರು. ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ” ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ.Renowned jk02_new jk02 new

 

English Summary
Title

Veteran Actor Nana Patekar Passes Away at 75: DK Shivakumar, PM Modi, and Film Fraternity Pay Tribute

Short Description
Veteran multilingual actor Nana Patekar has passed away at 75 following a sudden cardiac arrest at his Goa residence on Thursday. Despite emergency CPR efforts at Manipal Hospital, the Padma Shri awardee could not be revived. Karnataka Chief Minister DK Shivakumar expressed deep condolences, praising Patekar’s legendary film legacy and his dedicated social work for farmers. Prime Minister Modi and the film fraternity also mourned the loss. A state funeral has been announced.
Keywords
Renowned, multilingual actor, Nana Patekar, passes away, CM DK Shivakumar, condolences.