ನಟ ಮಂಡ್ಯ ರಮೇಶ್ ಅವರ ತಂದೆ ನಿಧನ..

ಮೈಸೂರು,ನವೆಂಬರ್,13,2020(www.justkannada.in): ಮಂಡ್ಯ ರಮೇಶ್ ರವರ ತಂದೆಯವರಾದ ಎನ್.ಸುಬ್ರಹ್ಮಣ್ಯಂ ರವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.kannada-journalist-media-fourth-estate-under-loss

ಮೈಸೂರಿನ ಮೈಸೂರು ದಟ್ಟಗಳ್ಳಿಯ ಹತ್ತಿರ ಸೋಮನಾಥಪುರ ನಿವಾಸದಲ್ಲಿ ನಟ ಮಂಡ್ಯ ರಮೇಶ್ ಅವರ ತಂದೆ ಎನ್.ಸುಬ್ರಹ್ಮಣ್ಯಂ ಕೊನೆಯುಸಿರೆಳೆದಿದ್ದಾರೆ. ಸಬ್ ರಿಜಿಸ್ಟರ್ ಆಗಿಯೂ ಸಹ ಸರ್ಕಾರಿ ಸೇವೆ ಸಲ್ಲಿಸಿ ಹಿರಿಯಕಲಾವಿದರಾಗಿ, ಮಂಡ್ಯ ಶಂಕರ ಮಠದ ಟ್ರಸ್ಟಿಗಳು, ಬಡಗನಾಡು ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಈ ಮೂಲಕ ಸಮಾಜದೊಂದಿಗೆ ನಿರಂತರ ಚಟುವಟಿಕೆಯಲ್ಲಿ ಭಾಗವಹಿಸಿ ಎಲ್ಲರಿಗೂ ಹುರುಪು ತುಂಬುತ್ತಿದ್ದರು.Actor -Mandya Ramesh's- father -passes away

Key words: Actor -Mandya Ramesh’s- father -passes away