ಅಶ್ಲೀಲ ಕಮೆಂಟ್ ಬಗ್ಗೆ ವಿಜಯಲಕ್ಷ್ಮಿ ದೂರು ವಿಚಾರ: ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ಏನು?

ಬೆಂಗಳೂರು,ಡಿಸೆಂಬರ್,27,2025 (www.justkannada.in):  ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ವಿರುದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು ನೀಡಿದ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ನಟ ಕಿಚ್ಚ ಸುದೀಪ್, ನಾನು ಜಗಳ ಮಾಡುವುದಕ್ಕೆ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ ಎಲ್ಲರನ್ನೂ ನಗಿಸಲು ಮತ್ತು ಮನರಂಜಿಸಲು ಚಿತ್ರರಂಗಕ್ಕೆ ಬಂದಿದ್ದೇನೆ. ಯುದ್ಧ ಅಂತ ಬಂದಾಗ ನನ್ನ ವಿಚಾರ ಬಗ್ಗೆ ನಾನು ಮಾತನಾಡುತ್ತೇನೆ. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಚೆನ್ನಾಗಿದ್ದೇವೆ ನನ್ನಲ್ಲಿರುವ ಹುಡುಗರು ಸರಿ ಇಲ್ಲ ಅಂದರೆ ಸರಿಪಡಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ.

ನನಗೆ ಹೊಡೆದರೆ ಕಪಾಳಕ್ಕೆ ಹೊರಡಿಸಿಕೊಳ್ಳುವಷ್ಟು ನಾನು ಒಳ್ಳೆಯವನಲ್ಲ ಪ್ರೀತಿಯಿಂದ ತಾಯಿ ಹೊಡಿಯುವುದೇ ಬೇರೆ ಅದೇ ಪಕ್ಕದ ಮನೆಯವರು ಹೊಡೆಯುವುದೇ ಬೇರೆಯಾಗುತ್ತದೆ ಎಂದು ನಟ ಸುದೀಪ್ ತಿಳಿಸಿದ್ದಾರೆ.

ತನ್ನ ಪುತ್ರಿ ಸಾನ್ವಿ ಬಗ್ಗೆ ಕೆಟ್ಟ ಕಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಟ ಸುದೀಪ್,  ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಕೆಟ್ಟ ಕಮೆಂಟ್ ಮಾಡುವವರು ವೇಸ್ಟ್ ನನ್ ಮಕ್ಕಳು. ಪುತ್ರಿ ಸಾನ್ವಿ ನನಗಿಂತ ದೊಡ್ಡದಾಗಿ ಬೆಳೆಯುತ್ತಾಳೆ ಎಂದು ಹೇಳಿದರು.

Key words: Vijayalakshmi, actor, Kiccha Sudeep