Monday, October 12, 2026

Dasara Wishes

ನರೇಂದ್ರ ಮೋದಿ ಮೆಂಟಲಿ ವೀಕ್, ಅತ್ಯಂತ ದುರ್ಬಲ ಪ್ರಧಾನಿ- ಸಚಿವ ಆರ್.ಬಿ ತಿಮ್ಮಾ...
Happy Dasara
Home Cinema ಆಟೋ ಓಡಿಸಿ ಹಳೆಯ ನೆನಪು ಮೆಲುಕು ಹಾಕಿದ ನವರಸ ನಾಯಕ

ಆಟೋ ಓಡಿಸಿ ಹಳೆಯ ನೆನಪು ಮೆಲುಕು ಹಾಕಿದ ನವರಸ ನಾಯಕ

ಬೆಂಗಳೂರು, ಮೇ 11, 2019 (www.justkannada.in): ನಟ ಜಗ್ಗೇಶ್  ಆಟೋ ಡ್ರೈವ್ ಮಾಡಿ, ತಮ್ಮ ಹಳೆಯ ನೆನಪನ್ನ ಮೆಲುಕು ಹಾಕಿದ್ದಾರೆ.

70-80ರ ದಶಕದಲ್ಲಿ ತಮ್ಮ ತಂದೆ ದುಡಿದು ತಿನ್ನು ಎಂದು ಹೇಳಿದಾಗ, ಜಗ್ಗೇಶ್ ಅಪ್ಪನ ಬುದ್ಧಿ ಮಾತಿಗೆ ಕೋಪಿಸಿಕೊಂಡು ಮನೆ ಬಿಟ್ಟಿದ್ದರಂತೆ.

ಮೈಸೂರಿನಲ್ಲಿ ಆಟೋ ಓಡಿಸುತ್ತಿದ್ದರಂತೆ. ತಮ್ಮದೇ ಒಂದು ಆಟೋ ಖರೀದಿಸಿ, ಒಳ್ಳೆಯ ದುಡಿಮೆ ಮಾಡಿ, ಅಪ್ಪನ ಎದುರಿಗೆ ಹೋಗಿ, ಅಪಮಾನಿಸಿದ ಅಪ್ಪನ ಮುಂದೆ, ಮೀಸೆ ತಿರುವಿ ನಿಲ್ಲಬೇಕೆೆಂದು ಅಂದುಕೊಂಡಿದ್ದರು. ಈ ಹಳೆಯ ನೆನಪುಗಳನ್ನು ಜಗ್ಗೇಶ್ ಮೆಲುಕು ಹಾಕಿದ್ದಾರೆ.

ಅಪ್ಪನ ಬೆಲೆ, ಅವರು ಹೇಳಿದ ಮಾತಿನ ಅರ್ಥ ಈಗ ಗೊತ್ತಾಗಿದೆ. ರಾತ್ರಿ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ, ಅವರ ಬಳಿ ಅನುಮತಿ ಕೇಳಿ ಆಟೋ ಓಡಿಸಿ, ಹಳೆಯ ನೆನಪನ್ನ ಮೆಲುಕು ಹಾಕಿದೆ ಎಂದು ಜಗ್ಗೇಶ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.