Friday, August 28, 2026

BDA Apartments

Home Cinema ಗೋಲ್ಡನ್ ಸ್ಟಾರ್ ‘ಗೀತಾ’ ಪೈರಸಿ ತಡೆಗೆ ಮಾಸ್ಟರ್ ಪ್ಲಾನ್ !

ಗೋಲ್ಡನ್ ಸ್ಟಾರ್ ‘ಗೀತಾ’ ಪೈರಸಿ ತಡೆಗೆ ಮಾಸ್ಟರ್ ಪ್ಲಾನ್ !

ಬೆಂಗಳೂರು, ಸೆಪ್ಟೆಂಬರ್ 23, 2019 (www.justkannada.in): ಸೆ.27ರಂದು ಗಣೇಶ್ ನಟನೆಯ ‘ಗೀತಾ’ ಬಿಡುಗಡೆ ಆಗುತ್ತಿದೆ.

ಸಿನಿಮಾ ರಾಜ್ಯಾದ್ಯಂತ ಅಂದಾಜು 250 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರವನ್ನು ಪೈರಸಿ ಹಾವಳಿಯಿಂದ ಚಿತ್ರವನ್ನು ಉಳಿಸಲು ನಿರ್ಮಾಪಕರು ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಪೈರಸಿ ನಿಗ್ರಹಕ್ಕಾಗಿ ಖಾಸಗಿ ಕಂಪನಿ ಸಹಕಾರ ಪಡೆದಿದ್ದಾರೆ. ಚಿತ್ರದ ನಕಲು ಪ್ರತಿಗಳನ್ನು ಇಂಟರ್​ನೆಟ್​ನಲ್ಲಿ ಯಾರೇ ಅಪ್​ಲೋಡ್ ಮಾಡಿದರೂ ಅದನ್ನು ಕೂಡಲೇ ಡಿಲೀಟ್ ಮಾಡಿಸುವ ಹೊಣೆಯನ್ನು ಈ ಕಂಪನಿ ಹೊತ್ತುಕೊಂಡಿದೆಯಂತೆ. ಮುಂಚಿತವಾಗಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ಮತ್ತು ಮನವಿಯನ್ನೂ ಸಲ್ಲಿಸಲಾಗಿದೆ.