ಮತ್ತೆ ‘ಚಮಕ್’ ಕೊಡಲು ಒಂದಾದ ಸಿಂಪಲ್ ಸುನಿ-ಗೋಲ್ಡನ್ ಸ್ಟಾರ್

ಬೆಂಗಳೂರು, ಜೂನ್ 25, 2020 (www.justkannada.in): ಸಾಮಾಜಿಕ ಜಾಲತಾಣಗಳಲ್ಲೇ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ಇದರ ನಡುವೆ ಗೋಲ್ಡನ್ ಸ್ಟಾರ್ ಅಭಿಮಾನಿಗಳಿಗೆ ಭರ್ಜರಿಯಾದ ಗಿಫ್ಟ್ ನೀಡಲು ತಯಾರಾಗಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.

ಈ ಹಿಂದೆ ಗಣೇಶ್ ಮತ್ತು ಸುನಿ ಕಾಂಬಿನೇಷನ್ ನಲ್ಲಿ ‘ಚಮಕ್’ ಚಿತ್ರ 2017ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಇದೀಗ ‘ಸಖತ್’ ಹೆಸರಿನ ಚಿತ್ರದ ಮೂಲಕ ಮತ್ತೊಮ್ಮೆ ಸುನಿ ಮತ್ತು ಗಣೇಶ್ ಒಂದಾಗಿದ್ದಾರೆ.