Friday, September 11, 2026

BDA Apartments

Home Cinema ಚಿಕ್ಕಮಗಳೂರಿನ ಮುತ್ತೋಡಿ ಕಾಡಿನಲ್ಲಿ ಅಭಿಮಾನಿಗಳ ನೆಚ್ಚಿನ ದಚ್ಚು

ಚಿಕ್ಕಮಗಳೂರಿನ ಮುತ್ತೋಡಿ ಕಾಡಿನಲ್ಲಿ ಅಭಿಮಾನಿಗಳ ನೆಚ್ಚಿನ ದಚ್ಚು

ಬೆಂಗಳೂರು, ಏಪ್ರಿಲ್ 19, 2021 (www.justkannada.in):

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿಕ್ಕಮಗಳೂರಿನ ಮುತ್ತೋಡಿ ಕಾನನ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದಾರೆ.

ಹೌದು. ರಾಬರ್ಟ್ ಬಿಡುಗಡೆಯಾದ ಬಳಿಕ ಸಿಕ್ಕ ಬಿಡುವಿನ ಸಮಯದಲ್ಲಿ ದರ್ಶನ್ ಮತ್ತೆ ಕಾಡಿನ ಹಾದಿ ಹಿಡಿದಿದ್ದಾರೆ.

ಕ್ಯಾಮರಾ ಹಿಡಿದುಕೊಂಡು ವನ್ಯ ಜೀವಿಗಳ ಫೋಟೋಗ್ರಫಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಅಭಿಮಾನಿಗಳ ನೆಚ್ಚಿನ ದಚ್ಚು.

ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸೆಲ್ಫೀ ಪೋಸ್ ನೀಡುತ್ತಾ ಜಾಲಿಯಾಗಿ ಕಾಲ ಕಳೆದಿದ್ದಾರೆ ದರ್ಶನ್.

ಅಂದಹಾಗೆ ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಕೂಡಾ.