ನಟ ದರ್ಶನ್ ಅಭಿಮಾನಿಯನ್ನ ಬಂಧಿಸಿದ ಪೊಲೀಸರು

ಬೆಂಗಳೂರು, ಜೂನ್.25,2024 (www.justkannada.in):  ಕೊಲೆ ಆರೋಪದಲ್ಲಿ ಈಗಾಗಲೇ ನಟ ದರ್ಶನ್ ಜೈಲು ಸೇರಿದ್ದು ಈ ಮಧ್ಯೆ ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿಯನ್ನ ಪೊಲೀಸರು ಬಂಧಿಸಿದ್ದಾರೆ.

ನಟ ದರ್ಶನ್ ಅಭಿಮಾನಿಗಳಿಗೆ ಪ್ರಚೋದಿಸುತ್ತಿದ್ದ ಆರೋಪದ ಮೇಲೆ  ಚೇತನ್ ಎಂಬುವವರನ್ನು ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಐಪಿಸಿ ಸೆಕ್ಷನ್ 504, 506 ಅಡಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ಚೇತನ್ ಕೂಡ ದರ್ಶನ್ ಫ್ಯಾನ್ ಆಗಿದ್ದು ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ಹಾಗೂ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ಮಾಡಿದ್ದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಜೈಲು ಸೇರಿದ ನಟ ದರ್ಶನ್ ಬಗ್ಗೆ ಉಮಾಪತಿ ಗೌಡ ಅವರು ಮಾತಾಡಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿ ಚೇತನ್ ನಿರ್ಮಾಪಕ ಉಮಾಪತಿ ಗೌಡರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ . ಅಷ್ಟೇ ಅಲ್ಲದೆ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ. ಹಾಗೂ ದರ್ಶನ್ ಇತರೆ ಅಭಿಮಾನಿಗಳಿಗೆ ಪ್ರಚೋದಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ನಿರ್ಮಾಪಕ ಉಮಾಪತಿ ಗೌಡ ದೂರು ನೀಡಿದ್ದರು.

Key words: Actor, Darshan, fan, arrested, police