Saturday, August 1, 2026

BDA Apartments

Home Cinema ಆರ್.ಆರ್ ನಗರದಲ್ಲಿ ನಟ ದರ್ಶನ್ ಪ್ರಚಾರ : ಮುನಿರತ್ನರನ್ನ ಗುಣಗಾನ ಮಾಡಿದ ಚಾಲೆಂಜಿಂಗ್ ಸ್ಟಾರ್…

ಆರ್.ಆರ್ ನಗರದಲ್ಲಿ ನಟ ದರ್ಶನ್ ಪ್ರಚಾರ : ಮುನಿರತ್ನರನ್ನ ಗುಣಗಾನ ಮಾಡಿದ ಚಾಲೆಂಜಿಂಗ್ ಸ್ಟಾರ್…

ಬೆಂಗಳೂರು,ಅಕ್ಟೋಬರ್,30,2020(www.justkannada.in): ಆರ್.ಆರ್ ನಗರ ಕ್ಷೇತ್ರದಲ್ಲಿ ಮುನಿರತ್ನ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕೊರೋನಾ ಸಮಯದಲ್ಲಿ ಅಕ್ಕಿ ಬೆಳೆ ನೀಡಿ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ ಅವರಿಗೆ ಮತನೀಡಿ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದರು.jk-logo-justkannada-logo

ಆರ್ ಆರ್. ನಗರ  ಉಪಚುನಾವಣೆ ಹಿನ್ನೆಲೆ  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್  ರೋಡ್ ಶೋ ನಡೆಸಿ ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರ ಮತಯಾಚಿಸಿದರು.  ಬಿ. ಕೆ. ನಗರ, ಜೆ. ಪಿ. ಪಾರ್ಕ್, ಯಶವಂತಪುರ ಮುಂತಾದ ಪ್ರದೇಶಗಳಲ್ಲಿ ರೋಡ್ ಶೋ ನಡೆಯಿತು. ಅಭಿಮಾನಿಗಳತ್ತ ಕೈ ಬೀಸುತ್ತಾ ನಟ ದರ್ಶನ್ ಮುನಿರತ್ನ ಪರವಾಗಿ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ನಟ ದರ್ಶನ್, ಆರ್.ಆರ್ ನಗರ ಕ್ಷೇತ್ರದಲ್ಲಿ ಮುನಿರತ್ನ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಆ ಸಮಯದಲ್ಲಿ ಕ್ಷೇತ್ರದ ಜನರಿಗೆ ಮುನಿರತ್ನ ಅವರು ಆಹಾರದ ವ್ಯವಸ್ಥೆ ಮಾಡಿದ್ದರು. ಅಕ್ಕಿ ಬೆಳೆ ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಕೋವಿಡ್ ಸಂಕಷ್ಟದ ನಾಲ್ಕು ತಿಂಗಳು ಎಲ್ಲರಿಗೂ ಮುನಿರತ್ನ ಸಹಾಯ ಮಾಡಿದ್ದಾರೆ. ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

20 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಕೋರೊನಾ ಇಲ್ಲದಿದ್ದರೇ ಚೆನ್ನಗಿರುತ್ತಿತ್ತು. ನಿರ್ಮಾಪಕರೇ ನಮಗೆ ಅನ್ನದಾತ. ಕುರುಕ್ಷೇತ್ರದಂತಹ ಸಿನಿಮಾ ಮಾಡಲು ಗುಂಡಿಗೆ ಬೇಕು ಎಂದು ಮುನಿರತ್ನ ಅವರನ್ನ ನಟ ದರ್ಶನ್ನ ಗುಣಗಾನ ಮಾಡಿದರು.

 ಸಚಿವ ಆರ್.ಅಶೋಕ್ ಮನೆಯಲ್ಲಿ ಭೋಜನ..

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರ ರೋಡ್ ಶೋ ನಡಸಿ ಭರ್ಜರಿ ಮತಯಾಚಿಸಿದ ನಟ ದರ್ಶನ್ ನಂತರ ಕಂದಾಯ ಸಚಿವ ಆರ್.ಅಶೋಕ್ ನಿವಾಸದಲ್ಲಿ ಬೋಜನ ಸವಿದರು. ಭೋಜನ ಬಳಿಕ   ನಟ ದರ್ಶನ್ ಮತ್ತೆ ಆರ್.ಆರ್ ನಗರ ವ್ಯಾಪ್ತಿಯಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿದ್ದು ರಾತ್ರಿ 10 ಗಂಟೆವರೆಗೆ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.

ಗೊರಗುಂಟೆ ಪಾಳ್ಯ, ಲಗ್ಗೆರೆ, ಲಕ್ಷ್ಮೀದೇವಿ ನಗರ ಸೇರಿ ವಿವಿಧ ಕಡೆಗಳಲ್ಲಿ ನಟ ದರ್ಶನ್ ಪ್ರಚಾರ ನಡೆಸುತ್ತಿದ್ದಾರೆ.

Key words: Actor -Darshan -campaign – RR nagar-bjp- candidate- muniratna