ಬೆಂಗಳೂರು,ಸೆಪ್ಟಂಬರ್,30,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹೆಚ್ಚುವರಿ ದಿಂಬು ಹಾಸಿಗೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಬೆಂಗಳೂರಿನ57ನೇ ಸೇಷನ್ಸ್ ನ್ಯಾಯಾಲಯಲ್ಲಿ ನಡೆಯುತ್ತಿದೆ.
ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿದ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ಕೊಲೆ ಆರೋಪಿ ದರ್ಶನ್ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು. ಈ ವೇಳೆ ಸರ್ಕಾರಿ ವಕೀಲರು ಮತ್ತು ಆರೋಪಿ ನಟ ದರ್ಶನ್ಪ ರ ವಕೀಲರ ನಡುವೆ ವಾದ ಕಾವೇರಿತು.
ಜೈಲು ಅಧಿಕಾರಿಗಳ ಪರವಾಗಿ ವಾದ ಮಂಡಿಸಿದ ಎಸ್‍ಪಿಪಿ ಪ್ರಸನ್ನಕುಮಾರ್, ಜೈಲು ಕೈಪಿಡಿಯಂತೆ ಕ್ರಮ ಕೈಗೊಳ್ಳಲಾಗಿದೆ. ಟೆಲಿಫೋನ್ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಸಹ ಮಾಡಲಾಗಿದೆ. ಚಾದರ್, ಹಾಸಿಗೆ ದಿಂಬು ಕೊಡಲಾಗಿದೆ. ಪಲ್ಲಂಗ ಕೇಳಿದರೆ ಕೊಡಲು ಅವಕಾಶ ಇಲ್ಲ ಓಡಾಡಲು ಅವಕಾಶ ಕೇಳಿದರು ಅದನ್ನು ಸಹ ಕೊಟ್ಟಿದ್ದೇವೆ ಎಂದು ವಾದಿಸಿದರು.
ಈ ವೇಳೆ ನಟ ದರ್ಶನ್ ಪರ ವಕೀಲರು ನಾವು ಹೆಚ್ಚುವರಿ ದಿಂಬು ಹಾಸಿಗೆ ಕೇಳಿದ್ದೇವೆ . ಚಿನ್ನದ ಮಂಚವನ್ನಲ್ಲ ಎಂದು ಹೇಳಿದರು. ನ್ಯಾಯಾಲಯ ವಿಚಾರಣೆಯನ್ನ ಕೆಲ ಕಾಲ ಮುಂದೂಡಿಕೆ ಮಾಡಿತು.
Key words: Renukaswamy Murder case, Actor, Darshan, petition, court