ಹಿಂದೂ ಯುವಕನ  ಹೆಸರಲ್ಲಿ ಪ್ರೊಫೈಲ್: ಡೇಟಿಂಗ್ ಆ್ಯಪ್ ಮೂಲಕ ಯುವತಿಗೆ ವಂಚಿಸಿದ್ಧ ಆರೋಪಿ ಬಂಧನ.

ಬೆಂಗಳೂರು,ಜೂನ್,10,2023(www.justkannada.in): ಹಿಂದೂ ಯುವಕನ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಡೇಟಿಂಗ್ ಆ್ಯಪ್  ಮೂಲಕ ಯುವತಿಗೆ ವಂಚಿಸಿದ್ದ ಆರೋಪಿಯನ್ನ ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುದಾಸಿರ್  ಬಂಧಿತ ಆರೋಪಿ.  ಅನಿರುದ್ ಹೆಸರಿನಲ್ಲಿ ಆರೋಪಿ ಮುದಾಸಿರ್ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಆ್ಯಪ್ ​​ನಲ್ಲಿ ಸಂಗಾತಿ ಹುಡುಕುತ್ತಿದ್ದ ಯುವತಿಗೆ ಮೆಸೇಜ್​​ ಕಳಿಸಿದ್ದ. ಬಳಿಕ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.

ನಂತರ ​ತಾಯಿಗೆ ಹುಷಾರಿಲ್ಲವೆಂದು  ಹೇಳಿ ಯುವತಿ ಬಳಿ 1 ಲಕ್ಷ ಹಣವನ್ನ ಪಡೆದಿದ್ಧ ಆರೋಪಿ ಮುದಾಸಿರ್ ಬಳಿಕ ತಾಯಿ ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿದ್ದ. ಇದಾದ ನಂತರ ದುಬೈಗೆ ಹೋಗಿ ಬರುತ್ತೆನೆಂದು ಫೋನ್ ಸ್ಪಿಚ್ ಆಫ್ ಮಾಡಿದ್ದ.  ಬಳಿಕ ಮುದಾಸಿರ್​ನನ್ನ ಪತ್ತೆ ಹಚ್ಚಿದ ಯುವತಿಗೆ ಶಾಕ್ ಎದುರಾಗಿತ್ತು. ಅನಿರುದ್ದ್​ ಹೆಸರಿನವನು ಅನಿರುದ್ದ್ ಅಲ್ಲ ಮುದಾಸಿರ್ ಅನ್ನೋದರ ಜೊತೆಗೆ ಮುದಾಸಿರ್​ ಗೆ ಮತ್ತೊಂದು ಮದುವೆಯಾಗಿ ಹೆಂಡತಿ ಮಕ್ಕಳು ಇದ್ದಾರೆಂಬುದು ಯುವತಿಗೆ ಗೊತ್ತಾಗಿದೆ. ಕೊನೆಗೆ ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿ ಮುದಾಸಿರ್ ನನ್ನು ಬಂಧಿಸಿದ್ದಾರೆ.

Key words: Accused – cheated- young woman – dating app -arrested.