Thursday, September 17, 2026

BDA Apartments

RCB ಗೆಲುವಿನ ಸಂಭ್ರಮಾಚರಣೆ ವೇಳೆ ಅಪಘಾತ: ಯುವಕ ಸ್ಥಳದಲ್ಲೇ ಸಾವು BDA JK_Adv BDA Adv
Home Crime RCB ಗೆಲುವಿನ ಸಂಭ್ರಮಾಚರಣೆ ವೇಳೆ ಅಪಘಾತ: ಯುವಕ ಸ್ಥಳದಲ್ಲೇ ಸಾವು

RCB ಗೆಲುವಿನ ಸಂಭ್ರಮಾಚರಣೆ ವೇಳೆ ಅಪಘಾತ: ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ, ಜೂನ್,4,2025 (www.justkannada.in):  ಪಂಜಾಬ್ ಕಿಂಗ್ಸ್ ಬಗ್ಗು ಬಡಿಯವು ಮೂಲಕ ಆರ್ ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ  ಗೆದ್ದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಜೋರಾಗಿದ್ದು ಈ ಮಧ್ಯೆ ಸಂಭ್ರಮಾಚರಣೆ ವೇಳೆ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ವೆಂಕಟೇಶ ನಗರದ ನಿವಾಸಿ ಅಭಿನಂದನ್ (21) ಮೃತ ಯುವಕ. ಉಷಾ ನರ್ಸಿಂಗ್‌ ಹೋಂ ಸರ್ಕಲ್‌ ಬಳಿಯ ರವೀಂದ್ರ ನಗರ ಗಣಪತಿ ದೇವಸ್ಥಾನದ ಮುಂದೆ ಅಪಘಾತ ಸಂಭವಿಸಿದೆ. ಲಕ್ಷ್ಮೀ ಟಾಕೀಸ್ ಕಡೆಯಿಂದ ಬರುತ್ತಿದ್ದ ಬೈಕ್ ಹಾಗೂ ಉಷಾ ಸರ್ಕಲ್ ಕಡೆಯಿಂದ ಹೊಗುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು  ಬಾರ್ ಬಿಲ್ಡಿಂಗ್ ಕೆಲಸ ಮಾಡುತ್ತಿದ್ದ ಯುವಕ ಅಭಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಗೆ ಯುವಕರು ಬೈಕ್‌ ಗಳಲ್ಲಿ ಹೊರಟಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.vtu

Key words: Accident, RCB, victory, celebration, Youth, dies