ವೀಕೆಂಡ್ ಟ್ರಿಪ್ ತೆರಳುತ್ತಿದ್ದ ವೇಳೆ ಅಪಘಾತ: ಬಸ್ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು

ಚಾಮರಾಜನಗರ,ಜೂ,15,2019(www.justkannada.in):  ಬೈಕೊಂದಕ್ಕೆ ಬಸ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಂಡೀಪುರ ಗಡಿ ತೆಕ್ಕನಹಳ್ಳ ಬಳಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಸೋಮು, ಪಂಜರಹಳ್ಳಯ ಗೋಕುಲ್ ಮೃತಪಟ್ಟಿರುವರು.‌ ಭಾನುವಾರವನ್ನು ಊಟಿಯಲ್ಲಿ ಕಳೆಯಬೇಕೆಂದು ಜಾಲಿ ರೈಡ್ ಹೊರಟಿದ್ದಾಗ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಧುಮಲೆ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಗೂಡಲೂರಿನ ಸಾರ್ವಜನಿಕ ಆಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದೆ.

Key words: Accident – Weekend Trip – Two youth –death-bus collision