ಹಿಟ್ ಅಂಡ್ ರನ್ ಗೆ ಮಾವ, ಅಳಿಯ ಬಲಿ.

ಹಾಸನ, ಮಾರ್ಚ್, 30,2024 (www.justkannada.in):   ಪಂಚರ್ ಆಗಿದ್ದ ಕಾರಿನ ಟೈರ್ ಬದಲಿಸುವಾಗ ಹಿಟ್ ಅಂಡ್ ರನ್ ಗೆ ಮಾವ ಮತ್ತು ಅಳಿಯ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶೆಟ್ಟಹಳ್ಳಿ ಬೈಪಾಸ್ ನಲ್ಲಿ ಈ ಘಟನೆ ನಡೆದಿದೆ.

ಬೇಲೂರು ತಾಲೂಕಿನ ದೇವಿಹಳ್ಳಿ ನಿವಾಸಿ ಜವರಯ್ಯ (65) ಹಾಗೂ ಅರಸಿಕೆರೆ ತಾಲೂಕಿನ ನಾಗೇನಹಳ್ಳಿ ನಿವಾಸಿ ಮಧು (35) ಮೃತಪಟ್ಟವರು. ಮಾವ ಜವರಯ್ಯ ಹಾಗೂ ಪತ್ನಿ ಜೊತೆ  ಮಧು ಬೆಂಗಳೂರಿನಿಂದ ಆಗಮಿಸುತ್ತಿದ್ದರು. ಈ ವೇಳೆ ಕರಿನ ಟೈರ್ ಪಂಚರ್ ಆಗಿದ್ದು ಟೈರ್ ಬದಲಿಸುವ ವೇಳೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮಧು ಸ್ಥಳದಲ್ಲೇ ಸಾವನ್ನಪ್ಪಿದ್ದು ಮಾವ ಜವರಯ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇನ್ನು ಮಧು ಅವರ ಪತ್ನಿಗೆ ಗಾಯಗಳಾಗಿದ್ದು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ.  ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದಾರೆ.

Key words: accident, death, hassan