Monday, October 12, 2026

Dasara Wishes

ನರೇಂದ್ರ ಮೋದಿ ಮೆಂಟಲಿ ವೀಕ್, ಅತ್ಯಂತ ದುರ್ಬಲ ಪ್ರಧಾನಿ- ಸಚಿವ ಆರ್.ಬಿ ತಿಮ್ಮಾ...
Happy Dasara
Home Front Page ಅರಮನೆ ಆವರಣದಲ್ಲಿ ಜಂಬೂ ಸವಾರಿ ತಾಲೀಮು ಆರಂಭಿಸಿದ ಅಭಿಮನ್ಯು ಆ್ಯಂಡ್ ಟೀಂ

ಅರಮನೆ ಆವರಣದಲ್ಲಿ ಜಂಬೂ ಸವಾರಿ ತಾಲೀಮು ಆರಂಭಿಸಿದ ಅಭಿಮನ್ಯು ಆ್ಯಂಡ್ ಟೀಂ

ಮೈಸೂರು, ಸೆಪ್ಟೆಂಬರ್ 19, 2021 (www.justkannada.in): ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ ಗಜಪಡೆ ತಾಲೀಮು ಇಂದಿನಿಂದ ಆರಂಭವಾಗಿದೆ.

ಅರಮನೆ ಆವರಣಕ್ಕೆ ಬಂದ ಬಳಿಕ ಎರಡು ದಿನ ಅರಮನೆಯಲ್ಲಿ ವಿಶ್ರಾಂತಿ ಪಡೆದ ಆನೆಗಳ ತಂಡ ಇಂದಿನಿಂದ ಅರಮನೆಯೊಳಗೆ ಅಭ್ಯಾಸ ಶುರು ಮಾಡಿದೆ. ಇನ್ನು ಗಜಪಡೆಗೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಸಮೀಪ ವಾಸ್ತವ್ಯಕ್ಕೆ ಶೆಡ್ ನಿರ್ಮಿಸಲಾಗಿದೆ,

ಆನೆಗಳು ಇರುವ ಜಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಮಾವುತ ಮತ್ತು ಕಾವಾಡಿಗಳ 50 ಜನ ಸದಸ್ಯರಲ್ಲಿ 35 ಮಂದಿಗೆ ಕೋವಿಡ್ ಮೊದಲ ಹಾಗೂ ಎರಡನೇ ಡೋಸ್‌ ಹಾಕಲಾಗಿದೆ.

ಇನ್ನು ತಾಲೀಮಿನ ಹಿನ್ನೆಲೆಯಲ್ಲಿ ಎಲ್ಲ ಆನೆಗಳಿಗೆ ವಿಶೇಷ ಪೌಷ್ಟಿಕ ಆಹಾರವನ್ನು ನಿತ್ಯ ನೀಡಲಾಗುತ್ತಿದೆ. ಇದರ ಜತೆಗೆ ಮಜ್ಜನವನ್ನು ಮಾಡಿಸಲಾಗುತ್ತಿದೆ.

key words: Abhimanyu and Team started jumbo savari practice at the Palace premises