Sunday, August 23, 2026

BDA Apartments

Home Crime ಪ್ರೇಯಸಿ ಜೈಲಿಗೆ ಹೋಗಬೇಕು:  ಸೆಲ್ಫಿ ವಿಡಿಯೋ ಮಾಡಿ ನಂತರ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಶರಣು…

ಪ್ರೇಯಸಿ ಜೈಲಿಗೆ ಹೋಗಬೇಕು:  ಸೆಲ್ಫಿ ವಿಡಿಯೋ ಮಾಡಿ ನಂತರ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಶರಣು…

ಮೈಸೂರು,ಮೇ,18,2019(www.justkannada.in):  ಪ್ರೀತಿಸಿದ ಹುಡುಗಿ ಬೇರೆ ಮದುವೆಯಾಗುತ್ತಿರುವ ಹಿನ್ನೆಲೆ ಯುವಕನೋರ್ವ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.

ನಂಜನಗೂಡಿನ ಕಸುವಿನಹಳ್ಳಿ ಗ್ರಾಮದಲ್ಲಿ  ಈ ಘಟನೆ ನಡೆದಿದೆ. 22 ವರ್ಷದ ಸಿದ್ದರಾಮಜು ಆತ್ಮಹತ್ಯೆಗೆ ಶರಣಾದ ಯುವಕ. ಸೆಲ್ಫಿ ವಿಡಿಯೋ ಮಾಡಿರುವ ಯುವಕ ಸಿದ್ದರಾಜು, ನನ್ನ ಸಾವಿಗೆ ನನ್ನ ಪ್ರೇಯಸಿ ಹಾಗೂ ಆಕೆಯ ತಾಯಿ ಕಾರಣ. ನನ್ನ ಪ್ರೇಯಸಿ ವಿಷ ಕೊಟ್ಟು ಸಾಯಿ ಎಂದು ಹೇಳಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆಸಿದ್ದಾರೆ.

ಅಲ್ಲದೆ ನನ್ನನ್ನ ಪ್ರೀತಿಸಿ ಆಕೆ ಬೇರೆ ವಿವಾಹವಾಗುತ್ತಿದ್ದಾಳೆ. ಅದ್ದರಿಂದ ಆಕೆ ವಿವಾಹವಾಗಬಾರದು. ಜೈಲಿಗೆ ಹೋಗಬೇಕು ಎಂದು ವಿಡಿಯೋದಲ್ಲಿ ಯುವಕ ತಿಳಿಸಿದ್ದಾನೆ. ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

Key words:   A young man Make a selfie video, after committed suicide..

#crimenews #death #boy #mysore