ಬ್ಲಫ್ ನೋಡಲು ತೆರಳಿದ ದಂಪತಿ : ಬನ್ನೂರು ಬಳಿ ರಸ್ತೆ ಅಪಘಾತ, ತಲೆ ಮೇಲೆ ಲಾರಿ ಹರಿದು ಮಡದಿ ಸ್ಥಳದಲ್ಲೇ ಮೃತ.

 

ಮೈಸೂರು, ಆ.12, 2019 : (www.justkannada.in ) : ಬನ್ನೂರು ಸಮೀಪ ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಿಬ್ಬಂದಿಯೊರ್ವರು ಮೃತಪಟ್ಟ ಧಾರುಣ ಘಟನೆ ನಡೆದಿದೆ.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಫೋಟೋಗ್ರಾಫರ್ ಕಮ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಮೈಸೂರಿನ ಕುವೆಂಪುನಗರದ ನಿವಾಸಿ ಕವಿತಾ (37) ಮೃತ ಮಹಿಳೆ.

ಏನಿದು ಘಟನೆ :
ಶಿವನಸಮುದ್ರದ ಬ್ಲಫ್ ಜಲಪಾತ ನೋಡುವ ಸಲುವಾಗಿ ಇಂದು ಬೆಳಗ್ಗೆ ಕವಿತಾ ಹಾಗೂ ಪತಿ ಲೋಕೇಶ್ (ಕಾವೇರಿ ಗ್ರಾಮೀಣ ಬ್ಯಾಂಕ್ ನ ಮುಖ್ಯ ಕಚೇರಿಯಲ್ಲಿ ಸಿಸ್ಟಕ್ ಅಡ್ಮಿನ್ ) ದ್ವಿಚಕ್ರ ವಾಹನದಲ್ಲಿ ತೆರಳಿದರು. 11 ಗಂಟೆ ಸುಮಾರಿಗೆ ಬನ್ನೂರಿನ ದುರಸ್ತಿಗೊಳ್ಳುತ್ತಿರುವ ಸೇತುವೆ ಬಳಿ ತೆರಳುತ್ತಿರುವಾಗ ಈ ಘಟನೆ ನಡೆದಿದೆ. ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ದಂಪತಿ ಕೆಳಕ್ಕೆ ಬಿದ್ದರು. ಆಗ, ಹಿಂದಿನಿಂದ ಬರುತ್ತಿದ್ದ ಲಾರಿ ಕವಿತಾ ಅವರ ತಲೆ ಮೇಲೆ ಹರಿದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟರು.
ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಮೈಸೂರಿನ ಕುವೆಂಪುನಗರ ನಿವಾಸಕ್ಕೆ ತರಲಾಯಿತು. ನಂತರ ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಸಂತಾಪ :
ಕವಿತಾ ಅವರ ನಿಧನಕ್ಕೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಕಳೆದ ಶುಕ್ರವಾರ- ಶನಿವಾರ ಸಂಸ್ಥೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದ ಫೋಟೋಗ್ರಫಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಚೇರಿಯಲ್ಲಿ ಸದಾ ನಗುಮುಖದಿಂದಲೇ ಸಹಪಾಠಿಗಳ ಜತೆ ಇರುತ್ತಿದ್ದ ಕವಿತಾ ಅವರ ನಿಧನ, ಸ್ನೇಹಿತರಿಗೆ, ಸಿಬ್ಬಂದಿಗೆ ಅಪಾರ ದುಖಃವನ್ನು ಉಂಟು ಮಾಡಿದೆ. ಕವಿತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಯಿಷ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

key words : mysore-accident-bannur-AIISH-dead-police

SUMMARY :

A road accident near Bannaru, a lorry on the head, wife died on the spot.
A tragic incident in the road accident which took place this morning near the Bannuru area has left one AIISH employe dead. Kavitha (37), a resident of Kuvempunagar, Mysore, was working as a photographer cum artist in AIISH