Friday, August 14, 2026

BDA Apartments

Home Front Page 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಕ್ಕ ಪಾಠ: ರಾಹುಲ್ ಗಾಂಧಿ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಕ್ಕ ಪಾಠ: ರಾಹುಲ್ ಗಾಂಧಿ

ಬೆಂಗಳೂರು, ಜನವರಿ 01, 2023 (www.justkannada.in): 2024ರ ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಬಿಜೆಪಿಗೆ ಕಷ್ಟವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರತಿಪಕ್ಷಗಳ ನಡುವೆ ಸರಿಯಾದ ಹೊಂದಾಣಿಕೆ ಅಗತ್ಯ. ಜನರ ಬಳಿಗೆ ಸುಮ್ಮನೆ ಹೋಗುವುದಕ್ಕಿಂತ, ಸ್ಪಷ್ಟವಾದ ದೃಷ್ಟಿಕೋನ ಇಟ್ಟುಕೊಂಡು ಹೋದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.

ಪ್ರತಿಪಕ್ಷಗಳು ‘ಭಾರತ್ ಜೋಡೊ’ ಯಾತ್ರೆಯ ಜೊತೆಗಿವೆ. ಆದರೆ ಇಂದಿನ ವಾತಾವರಣದಲ್ಲಿ ರಾಜಕೀಯ ಒತ್ತಡಗಳ ಕಾರಣಕ್ಕೆ ಕೆಲವು ಪಕ್ಷಗಳಿಗೆ ಯಾತ್ರೆಯ ಜೊತೆ ಗುರುತಿಸಿಕೊಳ್ಳಲು ಆಗುತ್ತಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ.

ಹಿಂಸೆ, ದ್ವೇಷಮುಕ್ತ ಭಾರತವನ್ನು ಕಟ್ಟುವ ಹಾಗೂ ಒಗ್ಗೂಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಯಾತ್ರೆಯು ಎಲ್ಲರಿಗೂ ಮುಕ್ತವಾಗಿದೆ’ ಎಂದು ರಾಹುಲ್ ತಿಳಿಸಿದ್ದಾರೆ.