Wednesday, August 5, 2026

BDA Apartments

Home Front Page ನನಗಾಗಲಿ ಸಿದ್ಧರಾಮಯ್ಯರಿಗಾಗಲಿ ಅಭ್ಯರ್ಥಿ ಘೋಷಿಸುವ ಅಧಿಕಾರ ಇಲ್ಲ- ಡಿ.ಕೆ ಶಿವಕುಮಾರ್.

ನನಗಾಗಲಿ ಸಿದ್ಧರಾಮಯ್ಯರಿಗಾಗಲಿ ಅಭ್ಯರ್ಥಿ ಘೋಷಿಸುವ ಅಧಿಕಾರ ಇಲ್ಲ- ಡಿ.ಕೆ ಶಿವಕುಮಾರ್.

ಬೆಂಗಳೂರು,ನವೆಂಬರ್,21,2022(www.justkannada.in):  ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನ ಘೋಷಿಸುವ ಅಧಿಕಾರ ನನಗಾಗಲಿ, ಸಿದ್ಧರಾಮಯ್ಯರಿಗಾಗಲಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಿನ್ನೆ ಅಭ್ಯರ್ಥಿಯನ್ನ ಸಿದ‍್ಧರಾಮಯ್ಯ ಘೋಷಿಸಿದ್ಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿ.ಕೆ ಶಿವಕುಮಾರ್, ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನ ಘೋಷಿಸುವ ಅಧಿಕಾರ ನನಗಾಗಲಿ ಸಿದ‍್ಧರಾಮಯ್ಯರಿಗಾಗಲಿ ಇಲ್ಲ. ಎಐಸಿಸಿಗೆ ಮಾತ್ರ ಅಭ್ಯರ್ಥಿಗಳನ್ನ ಘೋಷಿಸುವ ಅಧಿಕಾರವಿದೆ. ಮಲ್ಲಿಕಾರ್ಜುನ ಖರ್ಗೆಯೇ ನಮ್ಮ ಹೈಕಮಾಂಡ್ ಎಂದರು.

ಸಿದ್ದರಾಮಯ್ಯ ಅವರು ಗಂಗಾವತಿಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಬಗ್ಗೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕೆಲ ಸಂದರ್ಭಗಳಲ್ಲಿ ಕಳೆದ ಬಾರಿ ಸೋಲು ಕಂಡವರಿಗೆ ಉತ್ತೇಜನ ನೀಡುವ ಉದ್ದೇಶದಿಂದಲೂ ಹೇಳಿರಬಹುದು  ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words:  declare -candidate –AICC- decision-DK Shivakumar