ಮೋದಿ ಅಮಿತ್ ಶಾ ಕಂಡರೆ ಸಿಎಂ ಬಿಎಸ್ ವೈಗೆ ಭಯ: ಫೋನ್ ಟ್ಯಾಪಿಂಗ್ ಕೇಸ್ ಸಿಬಿಐಗೆ ಕೊಡಿ ಎಂದಿಲ್ಲ – ಮಾಜಿ ಸಿಎಂ ಸಿದ್ದರಾಮಯ್ಯ..

ಹುಬ್ಬಳ್ಳಿ,ಆ,19,2019(www.justkannada.in): ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ‌ಸಿಬಿಐಗೆ‌ ವಹಿಸಿವಂತೆ ನಾನು‌ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಲ್ಲ. ಯಡಿಯೂರಪ್ಪ ಈ‌ ವಿಷಯದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ  ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸಿಬಿಐ ನಿಷ್ಪಕ್ಷಪಾತ ತನಿಖೆ ನಡೆಸುವ ಬಗ್ಗೆ ಅನುಮಾನವಿದೆ. ನಮ್ಮ ರಾಜ್ಯದ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಸಬಹುದಾಗಿತ್ತು. ಸಿಬಿಐಗಿಂತ ನಮ್ಮ ಪೊಲೀಸರಿಂದಲೇ ತನಿಖೆ ನಡೆಸಬಹುದಿತ್ತು. ಸಿಬಿಐ ದುರ್ಬಳಕೆ ಮಾಡಿಕೊಳ್ಳಲು ಬಿಜೆಪಿ ಪ್ಲಾನ್ ರೂಪಿಸಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ. ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಾನು ಸಲಹೆ ನೀಡಿದ್ದೆ ಎಂದಿರುವ ಯಡಿಯೂರಪ್ಪ, ಆಪರೇಷನ್ ಕಮಲದ ಮೂಲಕ ಶಾಸಕರ ಖರೀದಿ ಮಾಡಿ ಕೋಟ್ಯಂತರ ರೂ ವ್ಯವಹಾರ ನಡೆಸಿರುವುದನ್ನು‌ ಸಿಬಿಐ ತನಿಖೆಗೆ ‌ವಹಿಸುತ್ತಾರಾ ಎಂದು ಸಿದ್ದರಾಮಯ್ಯ  ಪ್ರಶ್ನಿಸಿದರು.

ಪ್ರಧಾನಿ ಮೋದಿ, ಅಮಿತ್ ಷಾ ಕಂಡರೇ  ಸಿಎಂ ಬಿಎಸ್ ವೈ ಗಡಗಡ ನಡುಗುತ್ತಾರೆ.

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತ ಗಂಭೀರ ವಾಗಿದೆ. ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿ ಮೋದಿ, ಅಮಿತ್ ಷಾ ಕಂಡರೆ ಗಡಗಡ ನಡುಗುತ್ತಾರೆ. ಕೇಂದ್ರದಿಂದ ನೆರವು ತರಲು ವಿಫಲವಾಗಿದ್ದಾರೆ. ಅವರಿಗೆ ಭಯವಿದ್ದರೆ ನಮ್ಮನ್ನು ಪ್ರಧಾನಿ ಬಳಿ ಕರೆದೊಯ್ಯಲಿ‌ನಾವು ಪರಿಹಾರ ನೀಡುವಂತೆ ಒತ್ತಡ ಹೇರುತ್ತೇವೆ ಎಂದು ಚಾಟಿ ಬೀಸಿದರು.

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತ ಗಂಭೀರ ವಾಗಿದೆ. ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಸ್ಪಂದಿಸುತ್ತಿಲ್ಲ.ಪ್ರವಾಹ  ಬಂದು 15 ದಿನಗಳಾದರೂ ಕೇಂದ್ರದಿಂದ ಒಂದು ರುಪಾಯಿ ಪರಿಹಾರ ಬಂದಿಲ್ಲ. ಬಿಎಸ್ ವೈ ಒನ್ ಮ್ಯಾನ್ ಶೋ ತರ ತಿರುಗಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Key words: CM BS yeddyurappa- fears- Modi -Amit Shah-Former CM Siddaramaiah ..