Friday, September 18, 2026

BDA Apartments

ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ: ಸಿಎಂ ರಾಜೀನಾಮೆ ಮತ...
Home Front Page ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ: ಸಿಎಂ ರಾಜೀನಾಮೆ ಮತ್ತು ಎಫ್ ಐಆರ್ ದಾಖಲಿಗೆ...

ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ: ಸಿಎಂ ರಾಜೀನಾಮೆ ಮತ್ತು ಎಫ್ ಐಆರ್ ದಾಖಲಿಗೆ ಸಿದ್ಧರಾಮಯ್ಯ ಒತ್ತಾಯ.

ಬೆಂಗಳೂರು,ನವೆಂಬರ್,17,2022(www.justkannada.in): ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿಯನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದರ ಹೊಣೆ ಹೊತ್ತು  ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಮತ್ತು ಎಫ್ ಐಆರ್ ದಾಖಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದರು.

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಈ ಅಕ್ರಮದ ಹಿಂದೆ ಸಿಎಂ ಬೊಮ್ಮಾಯಿ ಇದ್ದಾರೆ.  ಇದರ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಸಿಎಂ ಬಸವರಾಜ ಬೊಮ್ಮಾಯಿ. ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ವಾಮಮಾರ್ಗದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸಿದ್ದಾರೆ. ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ siddaramaiah siddaramaiah 2

ಇದು ಸಿಎಂ ಬಿಜೆಪಿ ಚುನಾವಣಾಧಿಕಾರಿ ಮಾಡಿರುವ ಸಂಚು. ತಕ್ಷಣ ಸಿಎಂ ಬೊಮ್ಮಾಯಿ ಅರೆಸ್ಟ್ ಮಾಡಬೇಕು. ಎಫ್ ಐಆರ್ ದಾಖಲಾಗದಿದ್ದರೇ ಮುಂದಿನ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Key words: Misuse -permission -given – update- voter list- Siddaramaiah