Sunday, August 23, 2026

BDA Apartments

Home Front Page ಮೇಡ್ ಇನ್ ಚೈನಾ ಅಲ್ಲ ಇಂಡಿಯಾ ಬೇಕು: ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ಮೇಡ್ ಇನ್ ಚೈನಾ ಅಲ್ಲ ಇಂಡಿಯಾ ಬೇಕು: ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ಬೆಂಗಳೂರು. ನವೆಂಬರ್ 15, 2022 (www.justkannada.in): ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಅವರು ರೈತರ ಸಮಸ್ಯೆಗಳನ್ನು ಕಡೆಗಣಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ನ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಹಿಂಗೋಲಿಯಲ್ಲಿ ಸಭೆಯಲ್ಲಿ ಮಾತನಾಡಿ, ನಮಗೆ `ಮೇಡ್ ಇನ್ ಇಂಡಿಯಾ ಬೇಕು, `ಮೇಡ್ ಇನ್ ಚೈನಾ ಅಲ್ಲ ಎಂದಿದ್ದಾರೆ.

ಬಿಜೆಪಿ ಸರಕಾರ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರೂ ಪರಿಹಾರ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

ಕ್ಯಾಮೆರಾಗಳು, ಮೊಬೈಲ್‌ಗಳು ಮತ್ತು ಬಟ್ಟೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ಚೀನಾದ ರಫ್ತುದಾರರಿಗೆ ಇದರಿಂದ ಅನುಕೂಲವಾಗುತ್ತದೆ. ನಮಗೆ ಇಲ್ಲ. ಹೀಗಾಗಿ ನಮಗೆ ಮೇಡ್ ಇನ್ ಚೈನಾ ಉತ್ಪನ್ನಗಳು ಬೇಡ, ನಮಗೆ ಮೇಡ್ ಇನ್ ಇಂಡಿಯಾ ಬೇಕು ಎಂದಿದ್ದಾರೆ.