Sunday, September 20, 2026

BDA Apartments

ಮೋದಿಯವರ ಬೆಂಗಳೂರು ಭೇಟಿ ಎಲೆಕ್ಷನ್ ಗಿಮಿಕ್- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ...
Home Front Page ಮೋದಿಯವರ ಬೆಂಗಳೂರು ಭೇಟಿ ಎಲೆಕ್ಷನ್ ಗಿಮಿಕ್- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ.

ಮೋದಿಯವರ ಬೆಂಗಳೂರು ಭೇಟಿ ಎಲೆಕ್ಷನ್ ಗಿಮಿಕ್- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ.

ಬೆಂಗಳೂರು,ನವೆಂಬರ್,10,2022(www.justkannada.in):  ಪ್ರಧಾನಿ ಮೋದಿಯವರ ನಾಳಿನ ಬೆಂಗಳೂರು ಭೇಟಿ ಎಲೆಕ್ಷನ್ ಗಿಮಿಕ್ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ,  ಮೋದಿ ಬೆಂಗಳೂರು ಭೇಟಿ ಎಲೆಕ್ಷನ್ ಗಿಮಿಕ್. ಮೊದಲು 40 ಪರ್ಸೆಂಟ್ ಆರೋಪಕ್ಕೆ ಮೋದಿ ಉತ್ತರಿಸಲಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ  ಕೆಂಪಣ್ಣ ಅವರು ಪತ್ರ  ಬರೆದರೂ ಉತ್ತರಿಸಿಲ್ಲ ಎಂದು ಟಾಂಗ್ ನೀಡಿದರು.

ವಾಲ್ಮಿಕಿ ಕನಕ ಪ್ರತಿಮೆಗೆ ಮಾಲಾರ್ಪಣೆ ಇದು ಎಲೆಕ್ಷನ್ ಗಿಮಿಕ್ . ವಾಲ್ಮಿಕಿ ಕನಕ ಪ್ರತಿಮೆ ನಿರ್ಮಿಸಿದ್ದು ಕಾಂಗ್ರೆಸ್.  ಈಗ ಮಾಲಾರ್ಪಣೆ ಮಾಡಲು ಮೋದಿ ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮೋದಿ ಬರ್ತಾರೆ ಅಂತಾ ಹಿಂದೆ ಗುಂಡಿ ಮುಚ್ಚಿದ್ದರು. ಈಗ ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ.  ಕಳಪೆ ರಸ್ತೆ ನಿರ್ಮಿಸಿ ಕಿತ್ತೋದ್ರೆ ಏನು ಪ್ರಯೋಜನ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: Modi- Bengaluru -visit – election gimmick-former CM- Siddaramaiah.