Friday, September 18, 2026

BDA Apartments

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಪಿಐ BDA JK_Adv BDA Adv
Home Crime ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಪಿಐ..

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಪಿಐ..

ಚಿಕ್ಕಮಗಳೂರು,ನವೆಂಬರ್,8,2022(www.justkannada.in):   ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಪಿಐ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಎನ್.ಆರ್ ಪುರ ಪೊಲೀಸ್ ಠಾಣೆಯ ಸಿಪಿಐ ವಸಂತ ಕುಮಾರ್ ಭಾಗವತ್  ಲೋಕಾಯುಕ್ತ ಬಲೆಗೆ ಬಿದ್ದ ಸಿಪಿಐ. ಸಿಮೆಂಟ್ ಮತ್ತು ಟೈಲ್ಸ್ ವ್ಯಾಪಾರಿ ಮುಸ್ತಫಾ ಅಲಿ ಅವರ ಬಳಿ 10 ಸಾವಿರ ರೂ.ಗೆ ಲಂಚಕ್ಕೆ ಸಿಪಿಐ ವಸಂತ್ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮುಸ್ತಫಾ ಅಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಪಿಐ lokayukta

ಈ ನಡುವೆ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಡಿ ವೈಎಸ್ ಪಿ ನೇತೃತ್ವದಲ್ಲಿ ದಾಳಿ ನಡೆಸಿ ಲಂಚದ ಹಣ ಮತ್ತು ಸಿಪಿಐ ವಸಂತ ಅವರನ್ನ ವಶಕ್ಕೆ ಪಡೆಯಲಾಗಿದೆ.

Key words: Lokayukta- trap- CPI – accepting- bribe.