ರಾಜ್ಯ ಕೇಂದ್ರದ ಯೋಜನೆಗಳಿಂದ ಬೆಂಬಲ: ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಜನರ ಸಂಕಲ್ಪ-ಸಿಎಂ ಬಸವರಾಜ ಬೊಮ್ಮಾಯಿ.

ಹಾವೇರಿ,ನವೆಂಬರ್,8,2022(www.justkannada.in):  ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಲು ಜನರು ಸಂಕಲ್ಪ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಮೋಟೆ ಬೆನ್ನೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಕೇಂದ್ರ ಸರ್ಕಾರ,  ರಾಜ್ಯ ಸರ್ಕಾರದ ಯೋಜನೆಗಳಿಂದ ನಮಗೆ ಜನರ ಬೆಂಬಲ ಸಿಗುತ್ತಿದೆ. ಜನರು ಮತ್ತೆ ಬಿಜೆಪಿ ಅಧಿಕಾರಕ್ಕೆ ತರು ಸಂಕಲ್ಪ ಮಾಡಿದ್ದಾರೆ. ಜನಸಂಕಲ್ಪಯಾತ್ರೆ ಬಗ್ಗೆ ಸಿದ್ಧರಾಮಯ್ಯ ಟೀಕೆ ಸಂಬಂಧ ಅವರು  ಹೇಳಿರುವುದು ಯಾವುದು ಸತ್ಯ ಆಗಲ್ಲ ಎಂದರು.

ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ ಸಿಎಂ ಬಸವರಾಜ ಬೊಮ್ಮಾಯಿ, ಪದೇ ಪದೇ ಧಾರ್ಮಿಕ ಪರಂಪರೆ ಕೆಣಕೋದು ಎಷ್ಟು ಸರಿ. ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ದೇಶದ ಜನರಿಗೆ ನೋವಾಗಿದೆ. ಇಷ್ಟೆಲ್ಲ ಹೇಳಿದರೂ ಸಿದ್ಧರಾಮಯ್ಯ ರಾಹುಲ್ ಗಾಂಧಿ ಅಭಿಪ್ರಾಯವೇನು..? ಕೆಪಿಸಿಸಿ ಕಾರ್ಯಧ್ಯಕ್ಷ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳುತ್ತಾರಾ..? ಎಂದು ಪ್ರಶ್ನಿಸಿದರು.

Key words: People- bring BJP -back – power- CM- Basavaraja Bommai.