Saturday, August 15, 2026

BDA Apartments

Home Cinema ಇಂದು ನಟ ಅಪ್ಪು ಪ್ರಥಮ ಪುಣ್ಯಸ್ಮರಣೆ:  ಸಮಾಧಿ ಬಳಿಗೆ ಅಭಿಮಾನಿಗಳ ದಂಡು; ಪೊಲೀಸ್ ಭದ್ರತೆ.  

ಇಂದು ನಟ ಅಪ್ಪು ಪ್ರಥಮ ಪುಣ್ಯಸ್ಮರಣೆ:  ಸಮಾಧಿ ಬಳಿಗೆ ಅಭಿಮಾನಿಗಳ ದಂಡು; ಪೊಲೀಸ್ ಭದ್ರತೆ.  

ಬೆಂಗಳೂರು ಅಕ್ಟೋಬರ್ ,29,2022(www.justkannada.in):  ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನ ಅಗಲಿ ಇಂದಿಗೆ (ಅಕ್ಟೋಬರ್ 29) ಒಂದು ವರ್ಷ ಕಳೆದಿದ್ದು. ಇಂದು ಪುನೀತ್ ರಾಜುಕುಮಾರ್ ಅವರ ಮೊದಲ ಪುಣ್ಯಸ್ಮರಣೆ. ಹೀಗಾಗಿ  ಕಂಠೀರವ ಸ್ಟುಡಿಯೋದತ್ತ ಅಭಿಮಾನಿಗಳ ದಂಡು ಆಗಮಿಸುತ್ತಿದೆ.

ಕರುನಾಡ ಜನತೆ ಅಪ್ಪುಗೆಯ ಅಪ್ಪು ಅವರನ್ನು ನೆನೆದು ರಾಜ್ಯ ಕಂಬನಿ ಮಿಡಿಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ. “ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು, ಡಾ. ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು” ಎಂದು ಟ್ವೀಟ್ ಮಾಡಿದ್ದಾರೆ.

ನಟ ಅಪ್ಪು ಸಮಾಧಿ ಬಳಿಗೆ ಅಭಿಮಾನಿಗಳ ದಂಡು ಆಗಮಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ವಹಿಸಲಾಗಿದೆ. 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಸಮಾಧಿಯತ್ತ ನಟ ಅಪ್ಪು ಕುಟುಂಬ ಆಗಮಿಸುತ್ತಿದ್ದು ಪೂಜೆ ಸಲ್ಲಿಸಲಿದ್ದಾರೆ. ಕುಟುಂಬಸ್ಥರು ಪೂಜೆ, ಶಾಸ್ತ್ರ ನೆರವೇರಿಸಲಿದ್ದಾರೆ. ಅಪ್ಪುಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಇಟ್ಟು ಕುಟುಂಬಸ್ಥರು ಸಮಾಧಿ ಮುಂದೆ ಪೂಜೆ ಮಾಡಲಿದ್ದಾರೆ.

Key words:  Actor –Appu- first -memorial – today-Fans