Saturday, August 15, 2026

BDA Apartments

Home Front Page ಜನಾಶೀರ್ವಾದ ಸಿಗುವವರೆಗೂ ಗುದ್ಧಲಿ ಪೂಜೆ ಮಾಡಲ್ಲ-ಮಂಡ್ಯದಲ್ಲಿ ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ನಿಖಿಲ್ ಕುಮಾರಸ್ವಾಮಿ.

ಜನಾಶೀರ್ವಾದ ಸಿಗುವವರೆಗೂ ಗುದ್ಧಲಿ ಪೂಜೆ ಮಾಡಲ್ಲ-ಮಂಡ್ಯದಲ್ಲಿ ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ನಿಖಿಲ್ ಕುಮಾರಸ್ವಾಮಿ.

ಮಂಡ್ಯ,ಅಕ್ಟೋಬರ್,29,2022(www.justkannada.in):  ಜನಾಶೀರ್ವಾದ ಸಿಗುವವರೆಗೂ ನಾನು ಗುದ್ಧಲಿ ಪೂಜೆ ಮಾಡಲ್ಲ ಎಂದು ಜೆಡಿಎಸ್  ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಶ್ರೀರಂಗಪಟ್ಟಣದ  ಟಿಎಂ ಹೊಸೂರಿನಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಜನರ ಪ್ರೀತಿ ನನ್ನ ಇದೆ. ಅವರು ಎಂದಿಗೂ ನಮ್ಮನ್ನು ಕೈಬಿಡಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‍ ಗೆಲ್ಲಿಸಿ ಎನ್ನುವ ಮೂಲಕ ಮಂಡ್ಯದಲ್ಲಿ ಮತ್ತೊಂದು ಚುನಾವಣೆ ಎದುರಿಸಲು ನಿಖಿಲ್ ಕುಮಾರಸ್ವಾಮಿ ಸಿದ್ಧರಾಗುತ್ತಿರುವುದಾಗಿ ಹೇಳಿದರು.

ಜನಪ್ರತಿನಿಧಿಯಾಗುವವರೆಗೆ ನಾನು ಗುದ್ದಲಿ ಹಿಡಿಯಲ್ಲ. ಜನರ ಆಶೀರ್ವಾದ ಸಿಕ್ಕ ಬಳಿಕ  ಗುದ್ಧಲಿ ಪೂಜೆ ನೆರವೇರಿಸುತ್ತೇನೆ. ಜನರು ನನಗೊಂದು ಅವಕಾಶ ನೀಡುತ್ತಾರೆ. ಆಗ ಬಂದು ನಾನು ಮಂಡ್ಯದಲ್ಲಿ ಗುದ್ದಲಿ ಪೂಜೆ ಮಾಡುತ್ತೇನೆ. ಅಲ್ಲಿಯವರೆಗೆ ನಾನು ಯಾವುದೇ ಕಾಮಗಾರಿಗೂ ಗುದ್ದಲಿ ಪೂಜೆ ಮಾಡುವುದಿಲ್ಲ ಎಂದು ನಿಖಿಲ್ ತಿಳಿಸಿದರು.

Key words: Nikhil Kumaraswamy –expressed- his intention -contest -again – Mandya