Thursday, August 20, 2026

BDA Apartments

Home Front Page ಕಾಂಗ್ರೆಸ್ ಈಗ ಮನೆಯೊಂದು ಮೂರು ಬಾಗಿಲು ಆಗಿದೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ.

ಕಾಂಗ್ರೆಸ್ ಈಗ ಮನೆಯೊಂದು ಮೂರು ಬಾಗಿಲು ಆಗಿದೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ.

ಧಾರವಾಡ, ಅಕ್ಟೋಬರ್,28,2022(www.justkannada.in): ಕಾಂಗ್ರೆಸ್ ಈಗ ಮನೆಯೊಂದು ಮೂರು ಬಾಗಿಲು ಆಗಿದೆ. ಮಲ್ಲಿಕಾರ್ಜುನ ಖರ್ಗೆ ಅ್ಯಂಡ್ ಬೆಂಬಲಿಗರು ಗುಂಪೊಂದು ಆಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.

ಧಾರವಾಡದಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ಹಿಂದೆ  ಕಾಂಗ್ರೆಸ್ ಮನೆಯೊಂದು 2 ಬಾಗಿಲು ಆಗಿತ್ತು. ಇದೀಗ ಮನೆಯೊಂದು 3 ಬಾಗಿಲು ಆಗಿದೆ.  ಒಂದು ಯಾತ್ರೆ ಮಾಡಲಿ ಎರಡು ಯಾತ್ರೆ ಮಾಡಲಿ, 3 ಯಾತ್ರೆ ಮಾಡಲಿ,  ಕಾಂಗ್ರೆಸ್ ಮಾತ್ರ ಸುಧಾರಿಸುವುದಿಲ್ಲ.  ಕಾಂಗ್ರೆಸ್ ನವರ ಸ್ಥಿತಿ ದೇಶಾದ್ಯಂತ ನಾವು ನೋಡುತ್ತಿದ್ದೇವೆ. ಗುಜರಾತ್ ನಲ್ಲಿ  ಅಡ್ರಸ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.

ಕ್ಷೇತ್ರದ ಎಲ್ಲಾ ಕನ್ನಡ ಶಾಲೆಗಳಿಗೆ ಬಣ್ಣ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿದ್ಧ ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಹ್ಲಾದ್ ಜೋಶಿ,   ಕ್ಷೇತ್ರದ ಎಲ್ಲಾ ಕನ್ನಡ ಶಾಲೆಗಳಿಗೆ ಬಣ್ಣ ಹಚ್ಚುವುದಾಗಿ ಘೋಷಣೆ ಮಾಡಿದರು.   ಎನ್ ಜಿಒದಿಂದ ಬ್ರಷ್ ಬಣ್ಣ ಕೊಡುತ್ತೇವೆ. ಬಣ್ಣ ಹಚ್ಚಿಕೊಳ್ಳುವ ಕೆಲಸ ನಿಮ್ಮದು. ಕ್ಷಮತಾ ಸಂಸ್ಥೆಯಿಂದ ಬ್ರಷ್, ಬಣ್ಣ ನೀಡಲಾಗುತ್ತದೆ ಎಂದರು.

Key words: Congress – house -with -three doors- Union Minister- Prahlad Joshi