Sunday, August 2, 2026

BDA Apartments

Home Crime ಮಠದಲ್ಲೇ ನೇಣುಬಿಗಿದುಕೊಂಡು ಶ್ರೀ ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ.

ಮಠದಲ್ಲೇ ನೇಣುಬಿಗಿದುಕೊಂಡು ಶ್ರೀ ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ.

ರಾಮನಗರ,ಅಕ್ಟೋಬರ್,24,2022(www.justkannada.in):ಮಠದಲ್ಲೇ ನೇಣುಬಿಗಿದುಕೊಂಡು  ಶ್ರೀ ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ (45 ವರ್ಷ) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಬಂಡೇಮಠದಲ್ಲಿ ಈ ಘಟನೆ ನಡೆದಿದೆ.   ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಾಮೀಜಿಯ ಪಾರ್ಥೀವ ಶರೀರವನ್ನ ನೆಮಮಂಗಲ ಶವಗಾರಕ್ಕೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ  ಮಠದ ಆವರಣದಲ್ಲಿ ಲಿಂಗಾಯಿತ ಸಂಪ್ರದಾಯದಂತೆ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಲಿದೆ.

Key words: ramanagar-Basavalinga Swamiji – – committed- suicide