ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬಾಲಕ ಸಾವು.

ಬೆಳಗಾವಿ,ಅಕ್ಟೋಬರ್,24,2022(www.justkannada.in): ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬಾಲಕ  ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ಹಳೇ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ. ಹತ್ತರಗಿ ಗ್ರಾಮದ ವರ್ಧನ್​ ಈರಣ್ಣ ಬ್ಯಾಳಿ(6) ಮೃತಪಟ್ಟ ಬಾಲಕ.

ವರ್ಧನ್ ಹಬ್ಬಕ್ಕೆ ಬಟ್ಟೆ ಖರೀದಿಸಲು ತಂದೆ ಜೊತೆ  ಬೈಕ್ ನಲ್ಲಿ ಹೋಗುತ್ತಿದ್ದ  ವೇಳೆ ಹಳೆ ಗಾಂಧಿ ನಗರದ ಬ್ರಿಡ್ಜ್ ಮೇಲೆ  ಮಾಂಜಾ ದಾರ ಕುತ್ತಿಗೆಗೆ ತಗುಲಿ ಗಂಭೀರ ಗಾಯಗಳಾಗಿತ್ತು.  ಬಳಿಕ ಬಾಲಕ ವರ್ಧನ್ ನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರ್ಧನ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Key words: boy- died -caught – thread- Belgavi