Saturday, August 22, 2026

BDA Apartments

Home Front Page ಕಾಂಗ್ರೆಸ್ ನಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: 2023ಕ್ಕೆ ‘ಕೈ’ ಧೂಳಿಪಟ- ಸಿಎಂ ಬೊಮ್ಮಾಯಿ ವಾಗ್ದಾಳಿ.

ಕಾಂಗ್ರೆಸ್ ನಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: 2023ಕ್ಕೆ ‘ಕೈ’ ಧೂಳಿಪಟ- ಸಿಎಂ ಬೊಮ್ಮಾಯಿ ವಾಗ್ದಾಳಿ.

ಕಲ್ಬುರ್ಗಿ,ಅಕ್ಟೋಬರ್,19,2022(www.justkannada.in):  ಕಾಂಗ್ರೆಸ್ ನಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಇಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ. 2023ರಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುಡುಗಿದರು.

ಕಲ್ಬರ್ಗಿಯಲ್ಲಿ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಗೆ ಅಭಿವೃದ್ಧಿ ಬೇಕಾಗಿಲ್ಲ. ದಲಿತರು ಹಿಂದುಳಿದವರು ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮೋಸಮಾಡಿದೆ.  ವಕ್ಫ್ ಆಸ್ತಿಯನ್ನ ನುಂಗಿ ನೀರು ಕುಡಿದಿದ್ದಾರೆ. ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ತನಿಖೆ ಮಾಡುತ್ತೇವೆ. ಪಿಎಸ್ ಐ ಹಗರಣದಲ್ಲಿ ನಿಮ್ಮವರೇ ಮುಂದಿದ್ದಾರೆ.  ಮಕ್ಕಳಿಗೆ ಕೊಡಬೇಕಾದ  ಹಾಸಿಗೆ ದಿಂಬಿನಲ್ಲೂ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಎಸ್ಸಿ ಮತ್ತು ಎಸ್ ಟಿಗೆ  ಮೀಸಲಾತಿ ಹೆಚ್ಚಿಸಿದ್ದೇವೆ. 50 ವರ್ಷದಿಂದ ಕಾಂಗ್ರೆಸ್ ಏನು ಮಾಡಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಾವು ಬದ್ಧ. ಕಾಂಗ್ರೆಸ್ ನಲ್ಲಿ ಬಲಹೀನ ನಾಯಕತ್ವವಿದೆ.  ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಯುದ್ದಭೂಮಿ ಬಿಟ್ಟು ಯಾತ್ರೆ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು.

Key words: Kalyan Karnataka – Congress- CM -Bommai -janasankalpayatre