Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಪಿಎಫ್ ಐ ಬ್ಯಾನ್ ಮಾಡಿದ ತಕ್ಷಣ ಸಮಾಜಘಾತುಕ ಕೆಲಸ ನಿಲ್ಲುತ್ತೆ ಅನ್ನೋದು ಸುಳ್ಳು- ಮಾಜಿ ಸಿಎಂ...

ಪಿಎಫ್ ಐ ಬ್ಯಾನ್ ಮಾಡಿದ ತಕ್ಷಣ ಸಮಾಜಘಾತುಕ ಕೆಲಸ ನಿಲ್ಲುತ್ತೆ ಅನ್ನೋದು ಸುಳ್ಳು- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ರಾಮನಗರ,ಸೆಪ್ಟಂಬರ್,28,2022(www.justkannada.in): ಪಿಎಫ್ ಐ ಸಂಘಟನೆ ನಿಷೇಧಿಸಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಪಿಎಫ್ ಐ ಸಂಘಟನೆ ಬ್ಯಾನ್ ಮಾಡಿದ ಮಾತ್ರಕ್ಕೆ ಸಮಾಜಘಾತುಕ ಕೆಲಸ ನಿಲ್ಲಲ್ಲ. ಸಮಾಜಘಾತುಕ ಕೆಲಸ ನಿಲ್ಲುತ್ತೆ ಅನ್ನೋದು ಸುಳ್ಳು ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಮಾಜ ದ್ರೋಹಿ, ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ಯಾವುದೇ ಸಂಘಟನೆ ಪಾಲ್ಗೊಂಡಿದ್ದರೂ ಅದನ್ನು ನಿಷೇಧಿಸಬೇಕು. ಯಾರೇ ತಪ್ಪು ಮಾಡಿದರೂ ಉಗ್ರವಾದ ಕ್ರಮ ಕೈಗೊಳ್ಳಬೇಕು ಎಂದರು.

ಈಗಾಗಲೇ ಬಂಧನಕ್ಕೊಳಗಾಗಿರುವ ಪಿಎಫ್‌ಐ ಕಾರ್ಯಕರ್ತರು ನಡೆಸಿರುವ ಸಮಾಜ ವಿರೋಧಿ ಚಟುವಟಿಕೆಗಳನ್ನು ಜನರ ಮುಂದಿಟ್ಟರೆ ಅವರ ಪರ ಸಹಾನುಭೂತಿ ಇಟ್ಟುಕೊಂಡು ಪ್ರತಿಭಟನೆ ನಡೆಸಲು ಶುರುಮಾಡಿರುವ ಜನರಿಗೆ ವಾಸ್ತವತೆ ಮನದಟ್ಟಾಗುತ್ತದೆ ಎಂದರು.

Key words: PFI – ban-Former CM -HD Kumaraswamy.