Tuesday, August 11, 2026

BDA Apartments

Home Front Page ಬಾಬೂರಾವ್ ಚಿಂಚನಸೂರ್ ಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರಿಂದ ಸಿಎಂ ಬಿಎಸ್ ವೈಗೆ ಆಗ್ರಹ…

ಬಾಬೂರಾವ್ ಚಿಂಚನಸೂರ್ ಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರಿಂದ ಸಿಎಂ ಬಿಎಸ್ ವೈಗೆ ಆಗ್ರಹ…

ಬೆಂಗಳೂರು,ಆ,15,2019(www.justkannada.in): ಸಚಿವ ಸಂಪುಟ ರಚನೆ ಸಂಬಂಧ ಚರ್ಚಿಸಲು ಇಂದು ಸಿಎಂ ಬಿಎಸ್ ಯಡಿಯೂರಪ್ಪ ನವದೆಹಲಿಗೆ ತೆರಳುತ್ತಿದ್ದು, ಈ ಬೆನ್ನಲ್ಲೆ ಬಿಜೆಪಿ ನಾಯಕರಲ್ಲಿ ಸಚಿವ ಸ್ಥಾನಕ್ಕಾಗಿ ಲಾಭಿ ಶುರುವಾಗಿದೆ.

ಬಿಜೆಪಿ ಮುಖಂಡ ಬಾಬೂರಾವ್ ಚಿಂಚನಸೂರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಬಿಎಸ್ ವೈ ರನ್ನ ಭೇಟಿಯಾದ ಬಾಬೂರಾವ್ ಚಿಂಚನಸೂರ್ ಅವರ ಬೆಂಬಲಿಗರು, ಲೋಕಸಭೆ ಚುನಾವಣೆಯಲ್ಲಿ ಬಾಬೂರಾವ್ ಚಿಂಚನಸೂರ್ ಉತ್ತಮ ಕೆಲಸ ಮಾಡಿದ್ದಾರೆ.  ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಕೆಲಸ ಮಾಡಿದ್ದಾರೆ. ಈಗಾಗಲೇ ಅವರಿಗೆ ಮಂತ್ರಿ ಸ್ಥಾನದ ಭರವಸೆ ನೀಡಿದ್ರಿ.  ಹೀಗಾಗಿ ಅವರನ್ನ ಎಂಎಲ್ ಸಿ ಮಾಡಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.

ಚಿಂಚನಸೂರ್ ಅವರ ಬೆಂಬಲಿಗರ ಮನವಿ ಸ್ವೀಕರಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಈ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

Key words: Baburao Chinchanasur- supporters – demand- minister –post-CM BS yeddyurappa