Tuesday, August 11, 2026

BDA Apartments

Home Front Page ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ….

ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ….

ಬೆಂಗಳೂರು,ಆ,15,2019(www.justkannada.in):  ರಾಜ್ಯದಲ್ಲಿ ಧಾರಾಕಾರ ಮಳೆ, ಪ್ರವಾಹದಿಂದ ನಲುಗಿರುವ ಜನರಿಗೆ ಪರಿಹಾರ ಕಾರ್ಯ ನಡೆಯುತ್ತಿದ್ದು ಈ ನಡುವೆ  ಕೊಂಚ ಬಿಡುವು ಪಡೆದಿರುವ ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ರಚನೆ ಸಂಬಂಧ ಚರ್ಚಿಸಲು ಇಂದು ನವದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಸಂಜೆ 7.40ಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಬೆಂಗಳೂರಿನಿಂದ ನವದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.  ಇನ್ನು ಸಚಿವ ಸಂಪುಟ ರಚನೆ ಸಂಬಂಧ ಹೈಕಮಾಂಡ್ ಜತೆ ಸಿಎಂ ಬಿಎಸ್ ವೈ ಚರ್ಚಿಸಲಿದ್ದು, ಮೊದಲ ಹಂತದ ಸಚಿವರ ಪಟ್ಟಿಯನ್ನು ಒಪ್ಪಿಗೆ ಪಡೆಯಲಿದ್ದಾರೆ. ಈ ಮೂಲಕ ಮೊದಲ ಹಂತದಲ್ಲಿ 15 ಸಚಿವರಿಗೆ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇತ್ತ ರಾಜ್ಯದಲ್ಲಿ ಸಚಿವ ಸ್ಥಾನಕ್ಕಾಗಿ ಹಲವು ಬಿಜೆಪಿ ನಾಯಕರು ಲಾಬಿ ನಡೆಸುತ್ತಿದ್ದು, ಯಾವ ಯಾವ ನಾಯಕರು ಬಿಎಸ್ ವೈ ಸಂಪುಟ ಸೇರಲಿದ್ದಾರೆಂಬುದು ಶೀಘ್ರವೆ ತಿಳಿದು ಬರಲಿದೆ. ಸಿಎಂ ನೀಡುವ ಸಚಿವರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದರೇ ಇನ್ನೆರೆಡು ಮೂರು ದಿನಗಳಲ್ಲಿ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಲಿದೆ.

Key words: CM BS Yeddyurappa -Delhi –today- Cabinet