Friday, October 23, 2026

Dasara Wishes

Minister S.T. Somashekar releases Yuva Dasara posters DasraWishes_JK DasraWishes JK
Happy Dasara
Home Front Page ಕೊಡಗು ಜಿಲ್ಲೆಗೆ 14 ದಿನಗಳ ಕಾಲ ದಸರಾ ರಜೆ ಘೋಷಣೆ.

ಕೊಡಗು ಜಿಲ್ಲೆಗೆ 14 ದಿನಗಳ ಕಾಲ ದಸರಾ ರಜೆ ಘೋಷಣೆ.

ಕೊಡಗು, ಸೆಪ್ಟೆಂಬರ್ ,20,2022(www.justkannada.in):  ಕೊಡಗು ಜಿಲ್ಲೆಗೆ  ಸೆಪ್ಟಂಬರ್ 26ರಿಂದ ಅಕ್ಟೋಬರ್ 9ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ.

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿರ್ದೇಶನದ ಮೇರೆಗೆ ಇಂದು ಜಿಲ್ಲಾಧಿಕಾರಿ ಬಿಸಿ ಸತೀಶ್ ಕೊಡಗು ಜಿಲ್ಲೆಗೆ 14 ದಿನಗಳ ಕಾಲ ದಸರಾ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 5 ರಂದು ಮಡಿಕೇರಿಯಲ್ಲಿ ದಸರಾ ನಡೆಯಲಿದೆ.ಕೊಡಗು ಜಿಲ್ಲೆಗೆ 14 ದಿನಗಳ ಕಾಲ ದಸರಾ ರಜೆ ಘೋಷಣೆ dasara dasara 1

ದಸರಾ ಹಬ್ಬದ ಹಿನ್ನಲೆ ಪ್ರತಿ ಜಿಲ್ಲೆಗಳಿಗೂ ಅಲ್ಲಿನ ಹಬ್ಬದ ಆಚರಣೆಯನ್ನು ಗಮನಿಸಿ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ನಡೆಯುವ ಹಿನ್ನೆಲೆ ಮೈಸೂರು ಜಿಲ್ಲೆಗೂ ಸೆಪ್ಟೆಂಬರ್ 26 ಅಕ್ಟೋಬರ್ 9ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ.

Key words: dasara -holiday – 14 days – Kodagu district.