Sunday, August 16, 2026

BDA Apartments

Home Front Page ನಾವು ಅಧಿಕಾರಕ್ಕೆ ಬಂದ್ರೆ ಎಲ್ಲಾ ವಿವಾದಿತ ಕಾಯ್ದೆಗಳು ವಾಪಸ್- ಶಾಸಕ ಪ್ರಿಯಾಂಕ್ ಖರ್ಗೆ.

ನಾವು ಅಧಿಕಾರಕ್ಕೆ ಬಂದ್ರೆ ಎಲ್ಲಾ ವಿವಾದಿತ ಕಾಯ್ದೆಗಳು ವಾಪಸ್- ಶಾಸಕ ಪ್ರಿಯಾಂಕ್ ಖರ್ಗೆ.

ಬೆಂಗಳೂರು,ಸೆಪ್ಟಂಬರ್,16,2022(www.justkannada.in) ನಾವು ಅಧಿಕಾರಕ್ಕೆ ಬಂದ್ರೆ ಎಲ್ಲಾ ವಿವಾದಿತ ಕಾಯ್ದೆಗಳು ವಾಪಸ್ ಪಡೆಯುತ್ತೇವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಕುರಿತು ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಗೊಂದಲದ ವಾತಾವರಣ ಸೃಷ್ಠಿಸಿ ಮತಾಂತರ ನಿಷೇಧ ಕಾಯ್ದೆ ಅಂಗೀಕರಿಸಿದ್ದಾರೆ.  ಧಾರ್ಮಿಕ ಸ್ವಾತಂತ್ರದ ಹಕ್ಕು ರಕ್ಷಣೆ ವಿಧೇಯಕ ತಂದಿದ್ದರು  ಪರಿಷತ್ ನಲ್ಲಿ ನಿನ್ನೆ ಆ ವಿದೇಯಕವನ್ನೂ ಅಂಗೀಕರಿಸಿದ್ದಾರೆ.  ಮತಾಂತರ ನಿಷೇಧ ಕಾಯ್ದೆ  ಸಂವಿಧಾನಕ್ಕೆ ವಿರುದ್ಧವಾದದ್ದು. ಕೇಶವಕೃಪ ಮನವೊಲಿಸಲು ವಿಧೇಯಕ ಜಾರಿ ಮಾಡುತ್ತಿದ್ದಾರೆ. ಜನರ ದಿಕ್ಕು ತಪ್ಪಿಸಲು ಬಿಲ್ ತಂದಿದ್ದಾರೆ ಎಂದು ಟೀಕಿಸಿದರು.

ವಿದೇಯಕ ಹಿಂಪಡೆಯಬೇಕು.  ಬಿಲ್ ತರುವಾಗ ಸಂಫುರ್ಣವಾಗಿ ಮಾಹಿತಿ ನೀಡಬೇಕು . ಶೀಘ್ರವೇ ಕಾನೂನು ಹೋರಾಟ ಮಾಡುತ್ತೇವೆ.  ನಾವು ಅಧಿಕಾರಕ್ಕೆ ಬಂದ್ರೆ ಬಿಲ್ ವಾಪಸ್ ಪಡೆಯುತ್ತೇವೆ. ಗೋ ಹತ್ಯೆ ನಿಷೇಧ ಕಾಯ್ದೆಗೆ  ಹಣಕಾಸು ಇಲಾಖೆ  ಒಪ್ಪಿಗೆ ಸೂಚಿಸಿಲ್ಲ. ಆದರೂ ಜಾರಿ ಮಾಡಿದ್ದಾರೆ ಎಂದು ಕಿಡಿಕಾರಿದರು.

Key words: all -controversial –bill- will be –withdrawn-power- MLA -Priyank Kharge