Wednesday, July 29, 2026

BDA Apartments

Home Front Page ಕಾಂಗ್ರೆಸ್ ನವರು ನನ್ನನ್ನ ಟಾರ್ಗೆಟ್ ಮಾಡಿದ್ರೂ ಪರವಾಗಿಲ್ಲ:  ಒತ್ತುವರಿ ತೆರವಿಗೆ ಸಹಕರಿಸಿ- ಶಾಸಕ ಅರವಿಂದ ಲಿಂಬಾವಳಿ.

ಕಾಂಗ್ರೆಸ್ ನವರು ನನ್ನನ್ನ ಟಾರ್ಗೆಟ್ ಮಾಡಿದ್ರೂ ಪರವಾಗಿಲ್ಲ:  ಒತ್ತುವರಿ ತೆರವಿಗೆ ಸಹಕರಿಸಿ- ಶಾಸಕ ಅರವಿಂದ ಲಿಂಬಾವಳಿ.

ಬೆಂಗಳೂರು,ಸೆಪ್ಟಂಬರ್,13,2022(www.justkannada.in):  ಕಾಂಗ್ರೆಸ್ ನವರು ನನ್ನನ್ನ ಟಾರ್ಗೆಟ್ ಮಾಡಿದ್ರೂ ಪರವಾಗಿಲ್ಲ. ಆದರೆ ರಾಜಕಾಲುವೆ  ಒತ್ತುವರಿ ತೆರವಿಗೆ ಸಹಕರಿಸಬೇಕು ಎಂದು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಬಿಬಿಎಂಪಿ ಅಧಿಕಾರಿಗಳಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಈ ಕುರಿತು ಸದನದಲ್ಲಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ,  ಕಾಂಗ್ರೆಸ್ ನವರು ನನ್ನನ್ನ ಟಾರ್ಗೆಟ್ ಮಾಡಲಿ ಪರವಾಗಿಲ್ಲ. ಸದನದಲ್ಲಿ ಮನವಿ ಮಾಡುತ್ತೇನೆ. ಒತ್ತುವರಿ ತೆರವಿಗೆ ಸಹಕರಿಸಿ. ಯಾರು ಎಷ್ಟು ಒತ್ತುವರಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ.

ಇಷ್ಟು ವರ್ಷ ಒತ್ತುವರಿ ಮಾಡಿ ಎಂಜಾಯ್ ಮಾಡಿದ್ದೀರಿ. ಅಂಥವರು ಈಗ ಒತ್ತುವರಿ ತೆರವಿಗೆ ಸಹಕರಿಸಬೇಕು. ಬಲಿಷ್ಟರಿಂದಲೇ ಈಗ ಒತ್ತುವರಿ ತೆರವು ಮಾಡುತ್ತೇವೆ. ಎಷ್ಟೇ ಪ್ರಭಾವಿಯಾಗಿದ್ದರೂ ಬಿಡುವುದಿಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

Key words: Congress –targets-encroachment-rajakaluve – MLA- Arvinda Limbavali.