Friday, September 25, 2026

BDA Apartments

Home Front Page ‘KSOU’ ನಲ್ಲಿ ವಾಮಾಚಾರ: ಕೋಳಿ ತಲೆ, ಕಾಲು ಕತ್ತರಿಸಿ ಹಾಕಿ ವಿಕೃತಿ ಮೆರೆದ ದುಷ್ಕರ್ಮಿಗಳು.

‘KSOU’ ನಲ್ಲಿ ವಾಮಾಚಾರ: ಕೋಳಿ ತಲೆ, ಕಾಲು ಕತ್ತರಿಸಿ ಹಾಕಿ ವಿಕೃತಿ ಮೆರೆದ ದುಷ್ಕರ್ಮಿಗಳು.

ಮೈಸೂರು,ಸೆಪ್ಟಂಬರ್,13,2022(www.justkannada.in): ಸದಾ ವಿವಾದಗಳು, ಗದ್ದಲದಲ್ಲೇ ಕೂಡಿರುವ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಇದೀಗ ಮತ್ತೊಂದು ಅನಾಚಾರ ನಡೆದಿದೆ.

ಕೆ ಎಸ್ ಓಯುನ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ನಡೆದಿದೆ. ದುಷ್ಕರ್ಮಿಗಳು  ಕೋಳಿ ತಲೆ, ಕಾಲು ಕತ್ತರಿಸಿ ಕುಂಕುಮ, ಕೂದಲು, ಬಳೆಚೂರು ಜೊತೆಗೆ ಫೋಟೋ ಕತ್ತರಿಸಿ ಪತ್ರಿಕೋದ್ಯಮ‌ ವಿಭಾಗದ ಮುಖ್ಯಸ್ಥರ ಕೊಠಡಿಯಲ್ಲಿ ಹಾಕಿದ್ದಾರೆ.

ಹಿಂದೆಯಿದ್ದ ಎಚ್ ಓಡಿ ತೇಜಸ್ವಿ ನವಿಲೂರು ಕಚೇರಿಯಲ್ಲಿ  ಈ ಘಟನೆ ನಡೆದಿದೆ. ಆರು ತಿಂಗಳ ಹಿಂದೆ ತೇಜಸ್ವಿ ಎಚ್ಓಡಿ ಸ್ಥಾನದಿಂದ ಬದಲಾಗಿದ್ದರು. ಈ ನಡುವೆ ಕೊಠಡಿ ಹೊಸ ಎಚ್ ಒಡಿ ಸುಪರ್ದಿಯಲ್ಲಿತ್ತು. ಇದೀಗ ಸಹದ್ಯೋಗಿಗಳು ಹಿಂದಿನ ಎಚ್ಓಡಿ ಫೋಟೋ ಹರಿದು, ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ವಾಮಾಚಾರಕ್ಕೆ ಒಳಗಾದ ಅಧ್ಯಾಪಕ ತೇಜಸ್ವಿ ಅವರು  ದೂರು ನೀಡಿದ್ದಾರೆ.  ಕಳೆದ ಆರು ತಿಂಗಳ ಹಿಂದೆಯೇ ತೇಜಸ್ವಿ ಅವರು ಕೊಠಡಿ ಕೀ ನೀಡಿದ್ದು,  ಆರು ತಿಂಗಳ ಬಳಿಕ ಕೊಠಡಿಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ.

ಕಳೆದ ತಿಂಗಳಷ್ಟೇ ಕುಲಪತಿ ಹಾಗೂ ಸಹದ್ಯೋಗಿಗಳ ನಡುವೆ ಗಲಾಟೆ ನಡೆದಿತ್ತು. ಸಹದ್ಯೋಗಿ ಮೇಲೆ ಕುಲಪತಿ ಹಲ್ಲೆ ನಡೆಸಿದ್ರು. ಈ ಸಂಬಂಧ  ಜಯಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾನ್ಯತೆ ಕಳೆದುಕೊಂಡಿದ್ದ ಮುಕ್ತ ವಿವಿ ಹಗರಣಗಳಿಂದಲೇ ಹೆಸರುವಾಸಿಯಾಗಿದೆ ಎನ್ನಲಾಗಿದೆ.

Key words: KSOU-witchcraft-Department – Communication – Journalism