Thursday, August 13, 2026

BDA Apartments

Home Front Page ಇದು ಜನಸ್ಪಂದನ ಸಮಾವೇಶವಲ್ಲ, ಕಮಿಷನ್ ಸಮಾವೇಶ- ರಾಜ್ಯ ಕಾಂಗ್ರೆಸ್ ಟೀಕೆ.

ಇದು ಜನಸ್ಪಂದನ ಸಮಾವೇಶವಲ್ಲ, ಕಮಿಷನ್ ಸಮಾವೇಶ- ರಾಜ್ಯ ಕಾಂಗ್ರೆಸ್ ಟೀಕೆ.

ಬೆಂಗಳೂರು,ಸೆಪ್ಟಂಬರ್,10,2022(www.justkannada.in ಮೂರು ವರ್ಷದ ಸರ್ಕಾರದ ಸಾಧನೆ ಅನಾವರಣಗೊಳಿಸಲು ಇಂದು ರಾಜ್ಯ ಬಿಜೆಪಿ  ನಡೆಸುತ್ತಿರುವ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ,  ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮಾವೇಶವಲ್ಲ “ಕಮಿಷನ್ ಸಮಾವೇಶ” 40% ಕಮಿಷನ್ ಲೂಟಿಯ ಪಾಪದ ಹಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುವಿರಿ ಬೊಮ್ಮಾಯಿ ಅವರೇ? ನಿಮ್ಮದೇ ಪಕ್ಷದ ಕಾರ್ಯಕರ್ತ & ಗುತ್ತಿಗೆದಾರ ಸಂತೋಷ್ ಪಾಟೀಲ್‌ ರನ್ನು ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಹೇಳಿಕೊಳ್ಳುವಿರಾ..? ಎಂದು ಕುಟುಕಿದೆ.

ಸರ್ಕಾರ ಪರ್ಸೆಂಟೇಜ್ ಮೇಲೆ ನಡೆಯುತ್ತಿದೆಯೇ? ಗುತ್ತಿಗೆದಾರರು, ಜನಸಾಮಾನ್ಯರ ನಂತರ ಹೈಕೋರ್ಟ್ ಕೂಡ 40% ಸರ್ಕಾರದ ಪರ್ಸೆಂಟೇಜ್ ಬಗ್ಗೆ ಮಾತಾಡುತ್ತಿದೆ.  ಬೊಮ್ಮಾಯಿ ಅವರೇ  ಬ್ರಷ್ಟೋತ್ಸವದ ಇಂತಹ ನಾಚಿಕೆಗೇಡಿನ ಸಂಗತಿ ಎದುರಿಟ್ಟುಕೊಂಡು ಯಾವ ಪುರುಷಾರ್ಥಕ್ಕೆ ಸಮಾವೇಶ ನಡೆಸುತ್ತಿದ್ದೀರಿ? ನಾಡಿನ ಎದುರು ತಲೆ ತಗ್ಗಿಸಬೇಕಾದ ಸಮಯವಿದು ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಗುತ್ತಿಗೆದಾರರು ಸರ್ಕಾರದ ಕಮಿಷನ್ ಕಿರುಕುಳದ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಿಲ್ಲ, ಪತ್ರಿಕಾಗೋಷ್ಠಿ ನಡೆಸಿದರೂ ಉಪಯೋಗವಿಲ್ಲ, 40% ಕಮಿಷನ್ ಲೂಟಿ ನಿಂತೇ ಇಲ್ಲ. ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ನಿಮ್ಮ ಸರ್ಕಾರದ ಸಾಧನೆ ಏನು ಅಕ್ರಮಗಳನ್ನು ಮುಚ್ಚಿಕೊಳ್ಳುವುದೇ ಸಾಧನೆಯೇ? ಎಂದು ಚಾಟಿ ಬೀಸಿದೆ.

Key words: bjp-janaspandana-Criticise -Congress.