Wednesday, August 12, 2026

BDA Apartments

Home Front Page ಮುರುಘಾ ಮಠಕ್ಕೆ ಒಳ್ಳೆಯ ಆಡಳಿತಾಧಿಕಾರಿ, ಮಠಾಧೀಶರನ್ನ ನೇಮಿಸಿ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ.

ಮುರುಘಾ ಮಠಕ್ಕೆ ಒಳ್ಳೆಯ ಆಡಳಿತಾಧಿಕಾರಿ, ಮಠಾಧೀಶರನ್ನ ನೇಮಿಸಿ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ.

ವಿಜಯಪುರ,ಸೆಪ್ಟಂಬರ್,3,2022(www.justkannada.in):  ಮುರುಘಾ ಮಠಕ್ಕೆ ಒಳ್ಳೆಯ ಆಡಳಿತಾಧಿಕಾರಿ, ಮಠಾಧೀಶರನ್ನ ನೇಮಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರ ಮುರುಘಾ ಮಠ ಉಳಿಸುವ  ಕೆಲಸ ಮಾಡಬೇಕು.  ಒಳ್ಳೆಯ ಆಡಳಿತಾಧಿಕಾರಿ ಮಠಾಧೀಶರನ್ನ ನೇಮಿಸಬೇಕು. ಮುರುಘಾ ಶ್ರೀಗಳನ್ನಮಠದಲ್ಲಿ ಇಟ್ಟುಕೊಳ್ಳಲು ಆಗಲ್ಲ. ಲಿಂಗಾಯಿತ ಸಮುದಾಯದ ಒಳ್ಳೆಯವರನ್ನ ಮಠಾಧೀಶರನ್ನಾಗಿ ನೇಮಿಸಬೇಕು.

ಮುರುಘಾ ಮಠದಲ್ಲಿ ಸಾವಿರಾರು ಎಕರೆ ಭೂಮಿ ಸಾವಿರಾರು ಕೋಟಿ ಆಸ್ತಿ ಇದೆ.  ಹೀಗಾಗಿ ಒಳ್ಳೆಯವರನ್ನ ನೇಮಿಸಿ ಎಂದು ಆಗ್ರಹಿಸಿದರು.

Key words: Appoint – good administrator – Muruga Mutt-  MLA- Basan Gowda Patil Yatnal