Wednesday, August 19, 2026

BDA Apartments

Home Crime ಯುವತಿ ಅನುಮಾನಸ್ಪದ ಸಾವು ಕೇಸ್ : ಕೊಲೆಗೈದು ಎಸ್ಕೇಪ್ ಆಗಿದ್ದ ಪ್ರಿಯಕರನ ಬಂಧನ.

ಯುವತಿ ಅನುಮಾನಸ್ಪದ ಸಾವು ಕೇಸ್ : ಕೊಲೆಗೈದು ಎಸ್ಕೇಪ್ ಆಗಿದ್ದ ಪ್ರಿಯಕರನ ಬಂಧನ.

ಮೈಸೂರು,ಸೆಪ್ಟಂಬರ್,2,2022(www.justkannada.in):  ನಿನ್ನೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಿಯಕರನನ್ನ ಪೊಲೀಸರು ಬಂಧಿಸಿದ್ದಾರೆ.

ಆಶಿಕ್ (28) ಬಂಧಿತ ಆರೋಪಿ. ಪ್ರಿಯಕರನೇ ಯುವತಿ ಅಪೂರ್ವ ಶೆಟ್ಟಿ (21)ಯನ್ನ ಕೊಲೆಗೈದು ಎಸ್ಕೇಪ್ ಆಗಿದ್ದನು. ಅಪೂರ್ವ ಶೆಟ್ಟಿಯನ್ನು ಆಶಿಕ್ ಪ್ರೀತಿಸುತ್ತಿದ್ದ. ಅಪೂರ್ವ ಶೆಟ್ಟಿ ವಿಜಯನಗರದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದಳು. ಈ ನಡುವೆ ಈ ಇಬ್ಬರು ಪ್ರೇಮಿಗಳು ಎರಡು ದಿನಗಳ ಕಾಲ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ಇದೇ ವೇಳೆ ಇಬ್ಬರ ನಡುವೆ ಗಲಾಟೆ ನಡೆದು, ಅಪೂರ್ವ ಶೆಟ್ಟಿ ಕೊಲೆಯಲ್ಲಿ ಅಂತ್ಯವಾಗಿದೆ.

ಅಪೂರ್ವ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆಶಿಕ್ ಬಳಿಕ ಕತ್ತು ಹಿಸುಕಿ‌‌ ಕೊಲೆಗೈದು ಪರಾರಿಯಾಗಿದ್ದ.  ನಂತರ ಹೋಟೆಲ್ ನಿಂದ ಹೊರಟಿದ್ದ ಆಶಿಕ್ ಕೂಡ ಪಿರಿಯಾಪಟ್ಟಣದ ಕಂಪ್ಲಾಪುರ ಬಳಿ ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿದ್ದನು. ಈ ನಡುವೆ ಆಶಿಕ್ ನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆತನಿದ್ದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.  ಈ ಸಂಬಂಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Suspicious -death – young woman-mysore- Arrest -boyfriend