Thursday, July 30, 2026

BDA Apartments

Home Front Page ರಸ್ತೆ ಮಾಡಿ ಅಂದ್ರೆ ಈಜುಕೊಳ ಮಾಡಿದ್ದಾರೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ.

ರಸ್ತೆ ಮಾಡಿ ಅಂದ್ರೆ ಈಜುಕೊಳ ಮಾಡಿದ್ದಾರೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ.

ರಾಮನಗರ,ಆಗಸ್ಟ್,30,2022(www.justkannada.in):  ರಾಮನಗರದಲ್ಲಿ ಸುರಿದ ಭಾರಿ  ಮಳೆಗೆ ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತಗೊಂಡು ಸಂಚಾರ ಬಂದ್ ಆಗಿ ಅವಾಂತರ ಸೃಷ್ಠಿಯಾದ  ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.

ಮೈಸೂರು ಹೆದ್ದಾರಿಯಲ್ಲಿ ಉತ್ತಮ ಕೆಲಸ ಆಗಿದೆ ಎಂದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿರುವ  ಹೆಚ್.ಡಿ ಕುಮಾರಸ್ವಾಮಿ, ಏನು ಉತ್ತಮ ಕೆಲಸ ಮಾಡಿದ್ದಾರೆ ಬಂದು ನೋಡಲಿ.  ಪ್ರತಾಪ್ ಸಿಂಹ ಪೋಟೊ ತೆಗೆಸಿಕೊಂಡರು  ಇವರೇ ರಸ್ತೆ ನಿರ್ಮಿಸಿರುವಂತೆ ಫೋಟೊ ತೆಗೆಸಿಕೊಂಡರು.  ಬಿಡದಿಯಲ್ಲಿ ಅಧಿಕಾರಿಗಳ ಜೊತೆಯೂ ಸಭೆ ಮಾಡಿದರು.

ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದೆ. ಸಂಗನಬಸಪ್ಪನ ದೊಡ್ಡಿ ಬಳಿ ಪ್ರತಾಪ್ ಸಿಂಹ ಸ್ವಿಮ್ಮಿಂಗ್ ಮಾಡಬಹುದಿತ್ತು.  ರಸ್ತೆ ಮಾಡಿ ಅಂದ್ರೆ ಈಜುಕೊಳ್ಳ ಮಾಡಿದ್ದಾರೆ. ಪ್ರತಾಪ್ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನ ಬಿಡಲಿ ಎಂದು ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

Key words:  Former CM -H.D. Kumaraswamy-rain-MP-Prathap simha