Sunday, September 13, 2026

BDA Apartments

Home Front Page ಮುರುಘಾ ಶ್ರೀಗಳ ಬಂಧನವಾಗಿಲ್ಲ:  ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ- ವಕೀಲ ಉಮೇಶ್ ಸ್ಪಷ್ಟನೆ.

ಮುರುಘಾ ಶ್ರೀಗಳ ಬಂಧನವಾಗಿಲ್ಲ:  ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ- ವಕೀಲ ಉಮೇಶ್ ಸ್ಪಷ್ಟನೆ.

ಚಿತ್ರದುರ್ಗ,ಆಗಸ್ಟ್,29,2022(www.justkannada.in):   ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮಠದ ಮುರುಘಾ ಶ್ರೀಗಳನ್ನ ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿತ್ತು ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಠದ ಪರ ವಕೀಲ ಉಮೇಶ್, ಶ್ರೀಗಳನ್ನ ಬಂಧಿಸಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ವಕೀಲ ಉಮೇಶ್,   ಮುರುಘಾ ಶ್ರೀಗಳ ಬಂಧನವಾಗಿಲ್ಲ. ಪೊಲೀಸರೇ ಶ್ರೀಗಳಿಗೆ ಭದ್ರತೆ ನೀಡಿದ್ದಾರೆ. ಮಧ್ಯಾಹ್ನ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಮುರುಘಾ ಶ್ರೀಗಳ ಬಂಧನವಾಗಿಲ್ಲ muruga

ಮುರುಘಾ ಶ್ರೀಗಳನ್ನ ಹಾವೇರಿಯ ಬಂಕಾಪುರದ ಬಳಿ  ಪೊಲೀಸರು ವಶಕ್ಕೆ ಪಡೆದು ಚಿತ್ರದುರ್ಗದ ಕಡೆ ಕರೆದೊಯ್ಯುತ್ತಿದ್ದಾರೆ ಎನ್ನಲಾಗಿತ್ತು.

Key words: No- Arrest – Muruga shri – Advocate- Umesh