Saturday, August 8, 2026

BDA Apartments

Home Front Page ಕಾಂಗ್ರೆಸ್ ಗೆ ಗುಲಾಂ ನಬಿ ಅಜಾದ್ ರಾಜೀನಾಮೆ ವಿಚಾರ: ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ.

ಕಾಂಗ್ರೆಸ್ ಗೆ ಗುಲಾಂ ನಬಿ ಅಜಾದ್ ರಾಜೀನಾಮೆ ವಿಚಾರ: ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ.

ಕಲ್ಬುರ್ಗಿ,ಆಗಸ್ಟ್,27,2022(www.justkannada.in):  ಕಾಂಗ್ರೆಸ್ ಗೆ ಹಿರಿಯ ನಾಯಕ ಗುಲಾಂ ನಬಿ ಅಜಾದ್ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್ ರಾಜೀನಾಮೆ ಕೊಟ್ಟಿರುವುದು ಸರಿಯಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪಕ್ಷ ಬಿಡುವುದು ಸರಿಯಲ್ಲ. ಎಲ್ಲವನ್ನೂ ಅನುಭವಿಸಿ ಹೋಗುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದಲಿ ಅವರಿಗೆ ಎಲ್ಲಾ ಸ್ಥಾನಮಾನ ನೀಡಲಾಗಿತ್ತು. ಇಷ್ಟೆಲ್ಲಾ ನೀಡಿದರೂ ಪಕ್ಷ ಬಿಟ್ಟು ಹೋದರೇ ಏನು ಮಾಡಬೇಕು.  ಪಕ್ಷದಲ್ಲಿ ಅವರಿಗೆ ಸಿಕ್ಕಷ್ಟು ಅವಕಾಶ ಯಾರಿಗೂ ಸಿಗಲ್ಲಿಲ್ಲ. ಮುಂದೆ ಅವರು ಹೊಸ ಪಕ್ಷ ಕಟ್ಟುವುದಾಗಿ ಹೇಳಿದ್ದಾರೆ . ನೋಡೋಣಾ ಎಷ್ಟು ಜನರನ್ನ ಗೆಲ್ಲಿಸಿಕೊಂಡು ಬರ್ತಾರೆ ಎಂದರು.

Key words: Ghulam Nabi Azad- resignation –Congress- Mallikarjuna Kharge