Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಸಂಘಪರಿವಾರದ ಷಡ್ಯಂತ್ರಗಳಿಗೆ  ಬಗ್ಗಲ್ಲ, ಪ್ರತಿಭಟನೆ ಮಾಡ್ತೇವೆ- ಬಿ.ಕೆ ಹರಿಪ್ರಸಾದ್.

ಸಂಘಪರಿವಾರದ ಷಡ್ಯಂತ್ರಗಳಿಗೆ  ಬಗ್ಗಲ್ಲ, ಪ್ರತಿಭಟನೆ ಮಾಡ್ತೇವೆ- ಬಿ.ಕೆ ಹರಿಪ್ರಸಾದ್.

ಬೆಂಗಳೂರು,ಆಗಸ್ಟ್,22,2022(www.justkannada.in):  ಕಾಂಗ್ರೆಸ್ ಮಡಿಕೇರಿ ಚಲೋಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಸಂಘಪರಿವಾರದ ಷಡ್ಯಂತ್ರಗಳಿಗೆ  ಬಗ್ಗಲ್ಲ, ಪ್ರತಿಭಟನೆ ಮಾಡ್ತೇವೆ ಎಂದು ಸವಾಲು ಹಾಕಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿ.ಕೆ ಹರಿ ಪ್ರಸಾದ್, ವಿಪಕ್ಷ ನಾಯಕ ಸ್ಥಾನಮಾನ ಸಂವಿಧಾನಾತ್ಮಕ ಸ್ಥಾನಮಾನ. ಸರ್ಕಾರ ತಪ್ಪು ಮಾಡಿದಾಗ ಕಿವಿ ಹಿಡುವಂತ ಕೆಲಸ ಮಾಡುತ್ತೇವೆ. ಜನರ ಸಮಸ್ಯೆ ವಿಪಕ್ಷದವರು ಕೇಳಬಾರದು ಅಂತ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಸಂಘಪರಿವಾರದ ಷಡ್ಯಂತ್ರಗಳಿಗೆ ಬಗ್ಗಲ್ಲ, ಪ್ರತಿಭಟನೆ ಮಾಡ್ತೇವೆ- ಬಿ.ಕೆ ಹರಿಪ್...

ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಸಾವರ್ಕರ್ ಫೋಟೊ ಅಂಟಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿ.ಕೆ ಹರಿಪ್ರಸಾದ್,  ಬಿಜೆಪಿಯವರದ್ದು ಎಂಥ ವಿಕೃತ ಮನಸ್ಥಿತಿ ಅನ್ನೋದು ಗೊತ್ತಾಗುತ್ತೆ. ಸಿಎಂ ಬದಲಾವಣೆ ಬಿಎಸ್ ವೈ ಹುದ್ದೆಇಲ್ಲದ್ದನ್ನ ನೋಡಿದ್ರೇ ಬಿಜೆಪಿಯವರಿಗೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಆಗ್ತಿಲ್ಲ.  ಹೀಗಾಗಿ ಗಮನ ಬೇರೆಡೆ ಸೆಳೆಯಲು ಹೀಗೆ ಮಾಡ್ತಾರೆ ಎಂದು ಟೀಕಿಸಿದರು.

Key words: protest -bjp- congress-BK Hariprasad.