Friday, August 21, 2026

BDA Apartments

Home Front Page ಬೆಂಕಿ ಅವಘಡ ಹಿನ್ನೆಲೆ ದೇವರಾಜ ಮಾರುಕಟ್ಟೆಗೆ ಭೇಟಿ: ವರ್ತಕರ ಸಮಸ್ಯೆ ಆಲಿಸಿದ ಶಾಸಕ ಎಲ್. ನಾಗೇಂದ್ರ…

ಬೆಂಕಿ ಅವಘಡ ಹಿನ್ನೆಲೆ ದೇವರಾಜ ಮಾರುಕಟ್ಟೆಗೆ ಭೇಟಿ: ವರ್ತಕರ ಸಮಸ್ಯೆ ಆಲಿಸಿದ ಶಾಸಕ ಎಲ್. ನಾಗೇಂದ್ರ…

ಮೈಸೂರು,ಆ,13,2019(www.justkannada.in):  ನಿನ್ನೆ ದೇವರಾಜ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆ ಇಂದು ಶಾಸಕ ಎಲ್.ನಾಗೇಂದ್ರ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ವರ್ತಕರ ಸಮಸ್ಯೆ ಆಲಿಸಿದರು.

ಮೈಸೂರು ಮಹಾನಗರ ಪಾಲಿಕೆ ತಂಡದೊಂದಿಗೆ  ದೇವರಾಜ ಮಾರುಕಟ್ಟೆಗೆ ಶಾಸಕ ಎಲ್ ನಾಗೇಂದ್ರ ಭೇಟಿ ನೀಡಿ ವರ್ತಕರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು,  ಬೆಂಕಿ ಬಿದ್ದ ಸ್ಥಳಕ್ಕೆ ನಿನ್ನೆಯೆ ಭೇಟಿ ನೀಡಿದ್ದೆ. ಇಂದು ಕೂಡ ಪಾಲಿಕೆ ತಂಡದೊಂದಿಗೆ ಬೇಟಿ ನೀಡಿ ಪರಿಶೀಲಿಸಿದ್ದೇನೆ. ಈ ಕಟ್ಟಡ ಪುನರ್ ನಿರ್ಮಾಣ ಅಥವ ಕೆಡವುದರ ಬಗ್ಗೆ ತಜ್ಞರ ವರದಿಯನ್ನು ಕೋರ್ಟ್ ಕೇಳಿದೆ. ತಜ್ಞರ ವರದಿ ನಂತರವಷ್ಟೆ ದೇವರಾಜ ಮಾರುಕಟ್ಟೆ ಅಭಿವೃದ್ದಿ ಮಾಡಲಾಗುವುದು ಎಂದರು.

ಹಿಂದಿನ ಸರ್ಕಾರ ಹತ್ತು ಕೋಟೆ ಹಣ ನೀಡಿದೆ.ಮತ್ತಷ್ಟು ಹಣದ ಅಗತ್ಯವಿದ್ದಲ್ಲಿ ಸರ್ಕಾರದಿಂದ ಹಣ ಕೊಡಿಸುವ ಬಗ್ಗೆ ಪ್ರಯತ್ನ ಮಾಡುತ್ತೇನೆ. ರಾಜ್ಯದಲ್ಲಿ ನಮ್ಮ ಸರ್ಕಾರವೇ ಇರುವುದರಿಂದ ಸಿಎಂ ಅವರನ್ನು ಇಲ್ಲಿ ಪರಿಶೀಲನೆಗೆ ಕರೆತರುವ ಬಗ್ಗೆ ಪ್ರಯತ್ನಿಸುತ್ತೇನೆ. ವಾಸ್ಥವ ಸ್ಥಿತಿಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಎಲ್ಲವೂ ಕೋರ್ಟ್ ತೀರ್ಮಾನದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು  ಶಾಸಕ ಎಲ್ ನಾಗೇಂದ್ರ ತಿಳಿಸಿದರು.

Key words: MLA-L Nagendra-Visit – Devaraja market -listened – problem