Wednesday, September 16, 2026

BDA Apartments

ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿಚಾರಣೆ ಮುಂದೂಡಿದ ಇಡಿ ವಿಶೇಷ ಕೋರ್ಟ್ BDA JK_Adv BDA Adv
Home Front Page ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿಚಾರಣೆ ಮುಂದೂಡಿದ ಇಡಿ ವಿಶೇಷ ಕೋರ್ಟ್.

ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿಚಾರಣೆ ಮುಂದೂಡಿದ ಇಡಿ ವಿಶೇಷ ಕೋರ್ಟ್.

ನವದೆಹಲಿ,ಆಗಸ್ಟ್,17,2022(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನ  ದೆಹಲಿ ಇಡಿ ವಿಶೇಷ ಕೋರ್ಟ್ ಸೆಪ್ಟಂಬರ್ 27ಕ್ಕೆ ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೆಹಲಿ ಇಡಿ ವಿಶೇಷ ಕೋರ್ಟ್ ಗೆ ಡಿ.ಕೆ ಶಿವಕುಮಾರ್ ಹಾಜರಾಗಿದ್ದರು. ನ್ಯಾ. ವಿಕಸ್ ಧುಲ್ ಪೀಠದಲ್ಲಿ ವಿಚಾರಣೆ ನಡೆಯಿತು.  ದಾಖಲೆ ಸಲ್ಲಿಸುವಂತೆ ಕೋರ್ಟ್ ಇಡಿ ಪರ ವಕೀಲರಿಗೆ ಸೂಚನೆ ನೀಡಿದರು.

ಈ ಮಧ್ಯೆ ದಾಖಲೆ ಸಲ್ಲಿಸಲು ಇಡಿ ಪರ ವಕೀಲರು ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನ ಕೋರ್ಟ್ ಮುಂದೂಡಿದೆ.

Key words: Illegal -money -transfer –case- hearing – adjourned –DK Shivakumar