Wednesday, September 23, 2026

BDA Apartments

Home Front Page ಶಿವಮೊಗ್ಗದಲ್ಲಿ ವಿ.ಡಿ ಸಾವರ್ಕರ್ ಬ್ಯಾನರ್ ವಿಚಾರಕ್ಕೆ ಗಲಾಟೆ: ಪೊಲೀಸರಿಂದ ಲಾಠಿಚಾರ್ಜ್.

ಶಿವಮೊಗ್ಗದಲ್ಲಿ ವಿ.ಡಿ ಸಾವರ್ಕರ್ ಬ್ಯಾನರ್ ವಿಚಾರಕ್ಕೆ ಗಲಾಟೆ: ಪೊಲೀಸರಿಂದ ಲಾಠಿಚಾರ್ಜ್.

ಶಿವಮೊಗ್ಗ,ಆಗಸ್ಟ್,15,2022(www.justkannada.in):  ಇಂದು 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಹಾಕಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ ಸಾವರ್ಕರ್  ಬ್ಯಾನರ್ ಅನ್ನು ಕಿಡಿಗೇಡಿಗಳು ತೆರವುಗೊಳಿಸಿದ್ದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿ ಪೊಲೀಸರಿಂದ ಲಾಠಿಚಾರ್ಜ್ ನಡೆದಿದೆ.

ಶಿವಮೊಗ್ಗದ  ಅಮೀರ್ ಅಹ್ಮದ್ ವೃತ್ತದಲ್ಲಿ ಈ ಘಟನೆ ನಡೆದಿದೆ.  ಸ್ವಾತಂತ್ರ್ಯ ಹೋರಾಟಗಾರ ವಿ.ಡಿ ಸಾವರ್ಕರ್  ಅವರ ಭಾವಚಿತ್ರವನ್ನ ಕಿಡಿಗೇಡಿಗಳು ತೆರವುಗೊಳಿಸಿದ್ದು ಕಿಡಿಗೇಡಿಗಳ ಕೃತ್ಯವನ್ನ ಖಂಡಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಶಿವಮೊಗ್ಗದಲ್ಲಿ ವಿ.ಡಿ ಸಾವರ್ಕರ್ ಬ್ಯಾನರ್ ವಿಚಾರಕ್ಕೆ ಗಲಾಟೆ: ಪೊಲೀಸರಿಂದ ಲ...

ಇದೇ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.  ಸ್ಥಳಕ್ಕೆ ಎಸ್ ಪಿ ಭೇಟಿ ನೀಡಿದ್ದು, ಶಿವಮೊಗ್ಗ ನಗರದಲ್ಲಿ ಇಂದು ನಾಳೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ

Key words:  VD Savarkar- banner – Riot – Shimoga- Lathi charge -police.